ಮಣಿಪಾಲ, ಫೆ 03(DaijiworldNews/MS): ವಿದ್ಯಾರ್ಥಿಗಳಲ್ಲಿ ಮತ್ತು ಬೋಧಕರಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವುದಕ್ಕಾಗಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ [ಮಾಹೆ] 2022 ನ್ನು ಹೊಸತನ ಮತ್ತು ಉದ್ಯಮಶೀಲತೆಯ ವರ್ಷವಾಗಿ ಘೋಷಿಸಿದೆ.
ಭಾರತ ಸರ್ಕಾರದ ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಅನ್ವಯ ಮಾಹೆಯು ನೇಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್ಅಪ್ ಪಾಲಿಸಿ 2019 ಫಾರ್ ಸ್ಟೂಡೆಂಟ್ಸ್ ಆ್ಯಂಡ್ ಫ್ಯಾಕಲ್ಟಿ: ಎ ಗೈಡಿಂಗ್ ಫ್ರೇಮ್ವರ್ಕ್ ಫಾರ್ ಹೈಯರ್ ಎಜುಕೇಶನ್ ಇನ್ಸ್ಟಿಟ್ಯೂಶನ್ ನನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಂಡಿದೆ. ಶಿಕ್ಷಣ ಸಚಿವಾಲಯ ಮತ್ತು ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗ [ಯುಜಿಸಿ] ಮತ್ತು ಆಲ್ ಇಂಡಿಯ ಕೌನ್ಸಿಲ್ ಆಫ್ ಟೆಕ್ನಿಕಲ್ ಎಜುಕೇಶನ್ [ಎಐಸಿಟಿಇ] ಗಳಂಥ ಅತ್ಯುನ್ನತ ನಿಯಂತ್ರಕ ಸಂಸ್ಥೆಗಳು ಈ ನೀತಿಯನ್ನು ರೂಪಿಸಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿ-ಚಾಲಿತ ಹೊಸ ಶೋಧ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುವ ಉದ್ದೇಶವನ್ನು ಇದು ಹೊಂದಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ಸಿನಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಪರಿಸರವನ್ನು ರೂಪಿಸಿ ಸಕ್ರಿಯವಾಗಿಸುವ, ಸುಗಮವಾಗಿಸುವ ಮತ್ತು ಬಲಿಷ್ಠವಾಗಿಸುವ ಆಶಯವನ್ನು ಕೂಡ ಈ ನೀತಿಯು ಹೊಂದಿದೆ.
ಈ ನಿಟ್ಟಿನಲ್ಲಿ ಮಾಹೆಯು ತನ್ನ ಪೂರ್ವವಿದ್ಯಾರ್ಥಿಗಳ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಪ್ರಸ್ತುತ ಯಶಸ್ವಿ ಉದ್ಯಮಿಗಳಾಗಿರುವ ಮಾಹೆಯ ಹಳೆವಿದ್ಯಾರ್ಥಿಗಳನ್ನು ಕ್ಯಾಂಪಸಿಗೆ ಆಹ್ವಾನಿಸಿ ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳನ್ನು ಉತ್ತೇಜಿಸುವಲ್ಲಿ ಕ್ರಿಯಾಶೀಲ ಹೆಜ್ಜೆಯನ್ನು ಇರಿಸಲಿದೆ.
"ಮಾಹೆಯು ಸಂಶೋಧನ ಮತ್ತು ಹೊಸಮಾದರಿಯ ಶಿಕ್ಷಣದ ಕುರಿತು ಗಮನ ಹರಿಸುವ ಜೊತೆಗೆಯೇ ಸಮಾಜದ ಒಳಿತಿನ ಕುರಿತು ಗಮನಾರ್ಹ ಕ್ರಿಯಾಶೀಲ ಪ್ರಯತ್ನವನ್ನು ಮಾಡುತ್ತ ಬಂದಿದೆ. ನಮ್ಮ ನಾಡಿನ ಯುವ ಮನಸ್ಸು ಮತ್ತು ಪ್ರತಿಭೆಗಳನ್ನು ಉದ್ಯಮಶೀಲತೆಯತ್ತ ಉತ್ತೇಜಿಸುವ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಹೆಜ್ಜೆಯಾಗಿದೆ. ನೇಶನಲ್ ಇನ್ನೋವೇಶನ್ ಆ್ಯಂಡ್ ಸ್ಟಾರ್ಟ್ಅಪ್ ಪಾಲಿಸಿ-2019 ನ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಿ ಮಾಹೆಯ ಎಲ್ಲ ಸಂಸ್ಥೆಗಳಲ್ಲಿ ಉದ್ಯಮಶೀಲತೆಯ ಪರಿಸರವನ್ನು ಮೂಡಿಸುವ ಉದ್ದೇಶವನ್ನು ಹೊಂದಿದ್ದೇವೆ. ಇದು ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ ಬೋಧಕರಲ್ಲಿಯೂ ಕ್ರಿಯಾಶೀಲ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವಲ್ಲಿ ಸಹಾಯಕವಾಗಲಿದೆ. ನಮ್ಮ ವಿದ್ಯಾರ್ಥಿಗಳು ತಮ್ಮ ಉದ್ಯಮಶೀಲತೆಯ ಪ್ರತಿಭೆಯನ್ನು ಸಕ್ರಿಯಗೊಳಿಸುವಲ್ಲಿ ನಾವು ಎಲ್ಲ ರೀತಿಯ ಪ್ರೋತ್ಸಾಹವನ್ನು ನೀಡಲಿದ್ದೇವೆ".- ಡಾ. ರಂಜನ್ ಪೈ, ಅಧ್ಯಕ್ಷರು, ಮಾಹೆ ಟ್ರಸ್ಟ್ ಮತ್ತು ಚಯರ್ಮ್ಯಾನ್, ಎಂಇಎಂಜಿ
"ಇನ್ನೋವೇಶನ್ ಸೆಂಟರ್ ತನ್ನ 15ನೆಯ ವರ್ಷದ ಸಂಭ್ರಮದಲ್ಲಿದ್ದರೆ ಮಣಿಪಾಲ್ ಯೂನಿವರ್ಸಲ್ ಟೆಕ್ನಾಲಜಿ ಬಿಸಿನೆಸ್ ಇನ್ಕ್ಯುಬೇಟರ್ [MUTBI] 12 ವರ್ಷಗಳನ್ನು ಪೂರೈಸುತ್ತಿದೆ. ಮಣಿಪಾಲ್-ಗವರ್ನ್ಮೆಂಟ್ ಆಫ್ ಕರ್ನಾಟಕ ಬಯೋ ಇನ್ಕ್ಯುಬೇಟರ್ ಗೆ 4 ವರ್ಷಗಳಾಗುತ್ತಿವೆ. ನಮ್ಮ ದೇಶವು ತನ್ನ 75 ನೆಯ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಮಾಹೆಯಲ್ಲಿ 2022ನ್ನು ದ ಇಯರ್ ಆಫ್ ಇನ್ನೋವೇಶನ್ & ಎಂಟರ್ಪ್ರೈನರ್ಶಿಪ್ ಇಯರ್ ಆಗಿ ಘೋಷಿಸಲು ಅಭಿಮಾನಪಡುತ್ತೇನೆ. ನಮ್ಮ ಪೂರ್ವವಿದ್ಯಾರ್ಥಿಗಳು ಯಶಸ್ವಿ ಉದ್ಯಮಿಗಳಾಗಿ ಉದ್ಯೋಗಗಳ ಸೃಷ್ಟಿಗೆ ಮತ್ತು ಸಮಾಜದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕಾರಣರಾಗಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಈ ವರ್ಷ ನಾವು ನಮ್ಮ ಪೂರ್ವವಿದ್ಯಾರ್ಥಿಗಳ ಪರಂಪರೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದ್ದೇವೆ. ಅಲ್ಲದೆ, ‘ಲೀಡರ್ಶಿಪ್ ಸೆಮಿನಾರ್ ಸಿರೀಸ್’ನ್ನು ಆಯೋಜಿಸಿ ವಿದ್ಯಾರ್ಥಿಗಳನ್ನು ಮತ್ತು ಬೋಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರಿಯಾಶೀಲರಾಗಿ ಪ್ರವೃತ್ತರಾಗಲಿದ್ದೇವೆ. ಮಾಹೆ ಬಳಗದ ಸಹಕಾರದೊಂದಿಗೆ ಬಲಿಷ್ಟವಾದ ಉದ್ಯಮಶೀಲತಾ ಪರಿಸರವು ಇಲ್ಲಿ ರೂಪುಗೊಳ್ಳಲಿದೆ. ಶೀಘ್ರದಲ್ಲಿಯೇ ಮಾಹೆಯಲ್ಲಿ ಟೆಕ್ನಾಲಜಿ ರೀಸರ್ಚ್ ಪಾರ್ಕ್ ರೂಪುಗೊಳ್ಳುವುದರ ನಿರೀಕ್ಷೆಯಲ್ಲಿದ್ದೇವೆ". -ಲೆ. ಜ. [ಡಾ.] ಎಂ. ಡಿ. ವೆಂಕಟೇಶ್, ವಿಎಸ್ಎಂ [ನಿ.] ಕುಲಪತಿಗಳು, ಮಾಹೆ
"ವಿದ್ಯಾರ್ಥಿ-ಚಾಲಿತ ಇನ್ನೋವೇಶನ್ ಗಳನ್ನು ಉತ್ತೇಜಿಸುವಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಮಹತ್ತ್ವದ ಪಾತ್ರ ವಹಿಸುತ್ತವೆ. 2022 ನೆಯ ವರ್ಷದಲ್ಲಿ ಮಾಹೆಯು ವಿದ್ಯಾರ್ಥಿಗಳು ಮತ್ತು ಬೋಧಕರಲ್ಲಿ ನಾವೀನ್ಯ, ಕೌಶಲ ಮತ್ತು ಉದ್ಯಮಶೀಲತೆಯನ್ನು ಪ್ರೇರೇಪಿಸುವಲ್ಲಿ ಒತ್ತು ನೀಡುತ್ತಿದೆ. ಮಾಹೆಯು ಉದ್ಯಮಶೀಲರನ್ನು ರೂಪಿಸುವ ಸಮರ್ಥ ಪರಂಪರೆಯನ್ನು ಹೊಂದಿದೆ. ನಮ್ಮ ಕ್ಯಾಂಪಸ್ಸಿನಲ್ಲಿರುವ ಉದಯೋನ್ಮುಖ ಉದ್ಯಮಶೀಲರನ್ನು ನಿರಂತರವಾಗಿ ಪ್ರೋತ್ಸಾಹಿಸಲಿದ್ದೇವೆ. ಇದು ದೇಶದ ಸಮಾಜೋ-ಆರ್ಥಿಕ ವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ ಮತ್ತು ಉದ್ಯಮಶೀಲರಾಗಬಯಸುವ ವಿದ್ಯಾರ್ಥಿಗಳ ಹಾದಿಯನ್ನು ಸುಗಮಗೊಳಿಸಲಿದೆ".-ಡಾ. ಎಚ್. ಎಸ್. ಬಲ್ಲಾಳ್, ಸಹಕುಲಾಧಿಪತಿಗಳು, ಮಾಹೆ