ಉಡುಪಿ, ಫೆ 03 (DaijiworldNews/HR): ಸರಕಾರಿ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿವಾದ ನಡೆಯುತ್ತಿದ್ದು, ಈ ಗೊಂದಲವನ್ನು ನಿಲ್ಲಿಸುವುದಾದರೆ ಹಿಂದು ಸಂಘಟನೆಗ ಐದು ನಿಮಿಷದ ಕೆಲಸ. ಆದರೆ ಇದು ವಿದ್ಯಾರ್ಥಿನಿಯರ ಭವಿಷ್ಯದ ಪ್ರಶ್ನೆ ಸಿಎಫ್ಐ, ಪಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಈ ವಿವಾದ ನಡೆಯುತ್ತಿದೆ" ಎಂದು ಸರಕಾರಿ ಬಾಲಕಿಯರ ಕಾಲೇಜು ಆಡಳಿತ ಅಭಿವೃದ್ಧಿ ಮಂಡಳಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರಿಂದ 900 ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡುವ ಕೆಲಸ ಮಾಡುತ್ತಿದ್ದಾರೆ. ಸಂಘಟನೆಯ ಮತ್ತು ಆಡಳಿತ ಮಂಡಳಿಯ ಸದಸ್ಯನಾಗಿ ಉಳಿದ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಂದಿನ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ. ಅವರು ಸವಾಲಿನಿಂದ ಈ ಗೊಂದಲವನ್ನು ಉಂಟು ಮಾಡ್ತ ಇದ್ದಾರೆ ಎಂದರೆ ಅದಕ್ಕೆ ಹಿಂದು ಸಂಘಟನೆಯ ಮುಖಾಂತರ ಸರಿಯಾದ ಉತ್ತರ ಕೊಡಲು ನಮಗೆ ಗೊತ್ತಿದೆ" ಎಂದರು.
ಇನ್ನು "ಆಡಳಿತ ಮಂಡಳಿಯ ಬಗ್ಗೆ ಮಾತ್ರ ಮಾತಾಡಬೇಕು. ಅದನ್ನು ಹೊರತಾಗಿ ವಿಷಯ ಮಾತಾಡಿದರೆ ಸಂಘಟನೆಯ ಹಿಂದು ಕಾರ್ಯಕರ್ತನಾಗಿ ನಾನು ಮಾತನಾಡಬೇಕಾಗುತ್ತದೆ" ಎಂದು ಹೇಳಿದ್ದಾರೆ.
"ಶಿಕ್ಷಣದ ವಿಚಾರದಲ್ಲಿ ಏನಾದರೂ ಕೊರತೆ ಇದ್ದಿದ್ದರೆ ಸರಿಪಡಿಸಬಹುದು. ಆದರೆ ಉದ್ದೇಶ ಪೂರ್ವಕವಾಗಿ ಮಾಡುತ್ತಿರುವ ಹಿಜಾಬ್ ವಿಚಾರದಲ್ಲಿ ಯಾವುದೇ ಹೊಂದಾಣಿಕೆ ಇಲ್ಲ. ಹೆತ್ತ ತಂದೆ ತಾಯಿಗೆ ಗೌರವ ಕೊಡುವಂತೆ ಗುರುಗಳಿಗೂ ಗೌರವ ಕೊಡಬೇಕು. ಅದು ಬಿಟ್ಟು ಅನ್ಯ ಪುರುಷರು ಎನ್ನುವ ಭಾವ ಸರಿಯಲ್ಲ" ಎಂದಿದ್ದಾರೆ.
ಇನ್ನು ಸಾಕಷ್ಟು ಬಾರಿ ಶಾಸಕರು ಮತ್ತು ಶಾಲಾ ಕಾಲೇಜು ಮಂಡಳಿ ಪೋಷಕರಲ್ಲಿ ಮನವಿ ಮಾಡಿದ್ದಾರೆ. ಆನ್ ಲೈನ್ ಶಿಕ್ಷಣಕ್ಕೂ ಅವಕಾಶ ನೀಡಲಾಗಿದೆ ಆದರೂ ವಿದ್ಯಾರ್ಥಿಗಳು ತಮ್ಮ ಹಠದಿಂದ ಸವಾಲು ಹಾಕುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.