ಕುಂದಾಪುರ, ಫೆ 03 (DaijiworldNews/HR): ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಕುಂದಾಪುರ ಸರಕಾರಿ ಕಾಲೇಜಿನ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟ್ ಬಳಿ ತಡೆದು ನಿಲ್ಲಿಸಿ ಕ್ಯಾಂಪಸ್ಗೆ ಪ್ರವೇಶ ನಿರಾಕರಿಸಿದ ಘಟನೆ ಗುರುವಾರ ನಡೆದಿದೆ.
ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗದಂತೆ ಪ್ರಾಂಶುಪಾಲರು ತಿಳಿಸಿದ್ದರೂ ಇಂದು ಮತ್ತೆ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ತರಗತಿಗೆ ಆಗಮಿಸಿದ್ದು, ಕಾಲೇಜಿನ ಗೇಟ್ ಬಳಿ ಪ್ರಾಂಶುಪಾಲರು ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ವಾಗ್ವಾದ ನಡೆದಿದೆ.
ಸರಕಾರಿ ಆದೇಶದಲ್ಲಿ ಕುಂದಾಪುರ ಸರಕಾರಿ ಕಾಲೇಜು ಎಂಬ ಉಲ್ಲೇಖವಿಲ್ಲ ಎಂದು ವಿದ್ಯಾರ್ಥಿಗಳು ವಾದಿಸಿದ್ದು, ಸರ್ಕಾರ ಹೊರಡಿಸಿರುವ ಸುತ್ತೋಲೆ ರಾಜ್ಯಾದ್ಯಂತ ಅನ್ವಯಿಸುತ್ತದೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ಇನ್ನು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳು ಕಾಲೇಜಿನ ಆವರಣದ ಹೊರಗೆ ನಿಂತು ನಾವು ಭಾರತದ ಪ್ರಜೆಗಳು, ಭಯೋತ್ಪಾಕರಲ್ಲ, ನಮಗೂ ಕಲಿಕೆಗೆ ಅವಕಾಶ ಕೊಡಿ ಎಂದು ಮನವಿ ಮಾಡುತ್ತಿರುವುದು ಕಂಡು ಬಂತು.