ಬಂಟ್ವಾಳ, ಫೆ. 02 (DaijiworldNews/SM): ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪತ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದ್ದು ನಿರೀಕ್ಷೆಯಂತೆ ಕೆಲಸ ಸಾಗಿದರೆ ನಿಗದಿಪಡಿಸಿದ ಸಮಯಕ್ಕೆ ಸಂಚಾರಕ್ಕೆ ಮುಕ್ತವಾಗಬಹುದು ಎಂಬ ಕನಸು ಸಾರ್ವಜನಿಕರದ್ದು. ಆದರೆ ಕಾಮಗಾರಿ ಅತ್ಯಂತ ವೇಗವಾಗಿ ನಡೆಯುತ್ತಿದ್ದೆಯಾದರೂ ರಸ್ತೆ ಅಗಲೀಕರಣಕ್ಕಾಗಿ ಭೂಮಿ ಕಳೆದುಕೊಂಡ ಭೂಮಾಲೀಕರಿಗೆ ಹಾಗೂ ಕಟ್ಟಡ ಕಳೆದುಕೊಂಡು ಬೀದಿಗೆ ಬಂದವರಿಗೆ ಹಣ ಪಾವತಿಯಾಗಿಲ್ಲ ಎಂಬ ದೂರುಗಳು ಕೇಳಿ ಬಂದಿವೆ.
ಕೆಲವು ಅಂಗಡಿ ಮಾಲಕರಿಗೆ ನೋಟೀಸ್ ನೀಡದೇ ಏಕಾಏಕಿ ಅಂಗಡಿಗಳನ್ನು ಈಗೀಂದೀಗಲೇ ತೆರವು ಮಾಡುವಂತೆ ಗುತ್ತಿಗೆ ವಹಿಸಿ ಕೊಂಡ ಕಂಪೆನಿ ಕಡೆಯಿಂದ ಒತ್ತಡ ಗಳು ಹಾಕುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ. ಇಂದು ಬೆಳಿಗ್ಗೆ ಮೆಲ್ಕಾರ್ ನಲ್ಲಿ ವರ್ತಕರು ಹಾಗೂ ಗುತ್ತಿಗೆ ವಹಿಸಿಕೊಂಡ ಕಡೆಯವರ ನಡುವೆ ಈ ವಿಚಾರ ಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿದೆ ಎಂದು ಮಾಧ್ಯಮದವರಲ್ಲಿ ಅಳಲು ತೋಡಿಕೊಂಡರು.
ಬಿಸಿರೋಡಿನಿಂದ ಅಡ್ಡಹೊಳೆವರೆಗೂ ಅನೇಕ ಕೃಷಿಕರಿಗೆ , ಭೂಮಾಲಕರಿಗೆ , ವರ್ತಕರಿಗೆ ಇನ್ನೂ ಕೂಡ ಸರಿಯಾದ ಪ್ರಮಾಣದ ಹಣ ಪಾವತಿಯಾಗದೆ ಸಂಕಷ್ಟಕ್ಕೆ ಸಿಲುಕಿ ಪರಿಹಾರ ಮೊತ್ತಕ್ಕಾಗಿ ಅಲೆದಾಡುವ ಸ್ಥಿತಿ ನಿರ್ಮಾಣ ವಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಸಹಕಾರ ನೀಡುವುದು ನಮ್ಮ ಧರ್ಮ ಆದರೆ ಸರಿಯಾದ ರೀತಿಯಲ್ಲಿ , ಸಮಯಕ್ಕೆ ಸರಕಾರ ನಮಗೆ ಪರಿಹಾರ ಮೊತ್ತವನ್ನು ನೀಡಬೇಕು ಎಂಬುದು ಭೂ ಮಾಲೀಕರ ಅಳಲು.
ಬಾಕಿ ಇಲ್ಲ, ನಾಲ್ಕು ವರ್ಷಗಳ ಹಿಂದೆಯೇ ಪರಿಹಾರ ನೀಡಲಾಗಿದೆ: ಮಂಜುನಾಥ್
ಹೆದ್ದಾರಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪ್ಲಾನ್ ಗಳು ಬದಲಾಗಿ ಹೆಚ್ಚುವರಿ ಜಮೀನು ಅವಶ್ಯಕ ತೆ ಬಿದ್ದಾಗ ಅಂತಹ ಭಾಗದಲ್ಲಿ ಜಾಗ ಎಕ್ವೇರು ಮಾಡಲಾಗುತ್ತದೆ ಅಂತವರಿಗೆ ಕೆಲವೊಂದು ಕಡೆಗಳಲ್ಲಿ ಪರಿಹಾರ ಹಣ ಪಾವತಿಮಾಡಲು ಬಾಕಿಯಾಗಿದೆ, ಇನ್ನು ಕೆಲವು ತಾಂತ್ರಿಕ ದೋಷಗಳು, ದಾಖಲೆಗಳು ಸರಿಯಾಗಿಲ್ಲದಿದ್ದರೆ, ಜಂಟಿ ಖಾತೆಯಲ್ಲಿದ್ದರೆ , ಜಮೀನು ತಕರಾರು ಗಳಿದ್ದರೆ ಮಾತ್ರ ಹಣ ಪಾವತಿ ಯಾಗದೆ ಉಳಿದಿರಬಹುದು ಬಿಟ್ಟರೆ ಯಾರಿಗೂ ಹಣ ಪಾವತಿಸಲು ಬಾಕಿಯಿಲ್ಲ. ನಾಲ್ಕು ವರ್ಷಗಳ ಹಿಂದೆಯೇ ಸರಕಾರ ಚತುಷ್ಪತ ಹೆದ್ದಾರಿಯ ಕಾಮಗಾರಿಗೆ ಮುಹೂರ್ತ ಪಿಕ್ಸ್ ಮಾಡಿದ ಸಂದರ್ಭದಲ್ಲಿ ಹಣ ಪಾವತಿ ಮಾಡಲಾಗಿದೆ. ಆ ಸಂದರ್ಭದಲ್ಲಿಯೇ ಎಲ್ಲರಿಗೂ ನೋಟೀಸನ್ನು ಜಾರಿಮಾಡಲಾಗಿದ್ದು, ಪ್ರಸ್ತುತ ಮತ್ತೆ ನೋಟೀಸ್ ಜಾರಿ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಮೆಲ್ಕಾರ್ ನಲ್ಲಿ ವೆಹಿಕಲ್ ಅಂಡರ್ ಪಾಸ್
ಮೆಲ್ಕಾರ್ ಪಾಣೆಮಂಗಳೂರು ಎಂಬಲ್ಲಿ ವೆಹಿಕಲ್ ಅಂಡರ್ ಪಾಸ್ ನಿರ್ಮಾಣ ವಾಗುತ್ತಿದ್ದು, ಇಲ್ಲಿ ಕೆಲವು ಜಮೀನು ಸ್ವಾಧೀನಕ್ಕೆ ಬಾಕಿಯಾಗಿತ್ತು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇಕ್ಷಣೆ ಮಾಡಿದ್ದಾರೆ. ಅಲ್ಲಿ ಕೆಲವು ವರ್ತಕರಿಗೆ ಹಾಗೂ ಜಮೀನು ಮಾಲೀಕರಿಗೆ ಹಣ ಪಾವತಿಸಲು ಬಾಕಿಯಿದ್ದು ದಾಖಲೆಗಳನ್ನು ನೀಡಿದ ಕೂಡಲೇ ಹಣ ಪಾವತಿಸಲಾಗುತ್ತದೆ.
ಹಾಸನ ಅಫೀಸಿಗೆ ಸಂಪರ್ಕ ಮಾಡಬಹುದು:
ಬಿಸಿರೋಡು ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳು ಇದ್ದಲ್ಲಿ ಅಥವಾ ಹಣ ಪಾವತಿಸಲು ಬಾಕಿಯಾಗಿದ್ದಲ್ಲಿ ಹಾಸನದಲ್ಲಿರು ಭೂ ಸ್ವಾಧೀನ ಕಚೇರಿಯನ್ನು ಸಂಪರ್ಕ ಮಾಡಬಹುದು ಅಥವಾ ವಿಶೇಷ ಅಧಿಕಾರಿ ಮಂಜುನಾಥ್ ಅವರನ್ನು ಸಂಪರ್ಕ ಮಾಡಬಹುದು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ಅವರ ಮೊಬೈಲ್ ಸಂಖ್ಯೆ:
+91 98440 43528 ಕ್ಕೆ ಸಂಪರ್ಕ ಮಾಡುವಂತೆ ಅವರು ತಿಳಿಸಿದ್ದಾರೆ.