ಮಂಗಳೂರು ಅ18: ಕರೋಪಾಡಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಅಬ್ಧುಲ್ ಜಲೀಲ್ ಹತ್ಯೆ ಪ್ರಕರಣದಲ್ಲಿ ಅರೋಪಿತರಿಗೆ ರಾಜ್ಯ ಉಚ್ಚ ನ್ಯಾಯಾಲಯವು ಶರತ್ತು ಬದ್ಧ ಜಾಮೀನು ನೀಡಿದೆ.
ಜಸ್ಟೀಸ್ ಕೆ.ಎಸ್ ಮುದಗಲ್ ನೇತ್ರತ್ವದ ಏಕ ಸದಸ್ಯ ನ್ಯಾಯ ಪೀಠವು ಹನ್ನೊಂದು ಅರೋಪಿಗಳ ಜಾಮೀನು ಅರ್ಜಿಗಳನ್ನು ಪರೀಶೀಲಿಸಿ ಎಂಟು ಜನರಿಗೆ ಜಾಮೀನು ಮಂಜೂರುಗಿಳಿಸಿತು. ಜಾಮೀನು ದೊರೆತ ಅರೋಪಿಗಳಿಗೆ ಕಠಿಣ ನಿಭಂದನೆಗಳನ್ನು ವಿಧಿಸಿದ ಪೀಠವು ಅನುಮತಿಯಿಲ್ಲದೆ ರಾಜ್ಯ ಬಿಟ್ಟು ಹೊರಗೆ ಹೋಗುವಂತಿಲ್ಲ ಎಂದು ಅದೇಶಿಸಿದೆ.
ಪ್ರಜ್ವಲ್ ರೈ, ಪುಶ್ಪರಾಜ್,ಸಚಿನ್,ರೋಷನ್,ಪುನೀತ್,ವಚನ್, ಹಾಗೂ ಪ್ರಶಾಂತ್ ಜಾಮೀನು ದೊರೆತವರಲ್ಲಿ ಒಳಗೊಂಡಿದ್ದಾರೆ. ಇತರ ಅರೋಪಿಗಳಾದ ರಾಜೇಶ್ ನಾಯ್ಕ್, ನರಸಿಂಹ, ಹಾಗೂ ಸತೀಶ್ ರೈ ಇವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.