ಕಾಸರಗೋಡು, ಫೆ. 02 (DaijiworldNews/SM): ಜಿಲ್ಲೆಯಲ್ಲಿ ಬುಧವಾರದಂದು ಮತ್ತೆ 875 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದೆ.
ಜಿಲ್ಲೆಯಲ್ಲಿ 938 ಮಂದಿ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 5,554 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
19,024 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,60,464 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,52,514 ಮಂದಿ ಗುಣಮುಖರಾಗಿದ್ದಾರೆ.