ಸುರತ್ಕಲ್ , ಫೆ 02(DaijiworldNews/MS): ಯುವಕನೊಬ್ಬನ ಮೇಲೆ ತಂಡವೊಂದು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆಗೆ ಯತ್ನಿಸಿದ ಘಟನೆ ಫೆ.01 ರ ತಡರಾತ್ರಿ ರಾತ್ರಿ 11.45ಕ್ಕೆ ಸುಮಾರಿಗೆ ಕಾಟಿಪಳ್ಳದ ಕೃಷ್ಣಾಪುರದಲ್ಲಿ ನಡೆದಿದೆ.
ಮೊಹಮ್ಮದ್ ಅನಾಸ್ (29 ) ಹಲ್ಲೆಗೊಳಗಾದ ಯುವಕ. ತನ್ನ ಪರಿಚಯಸ್ಥರೊಂದಿಗೆ ತನ್ನ ಮನೆ ಮುಂದೆ ಮಾತನಾಡುತ್ತಾ ನಿಂತಿದ್ದಾಗ 4-5 ಮಂದಿ ಮಾರಣಾಂತಿಕ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ.
ಆರೋಪಿಗಳನ್ನು ಚಾರು, ರವೂಫ್, ಅಕ್ಕಿ , ಮುಸ್ತಫಾ ಮತ್ತು ಇನ್ನೊಬ್ಬ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೆಸರಿಸಲಾಗಿದೆ. ಹಲ್ಲೆಗೊಳಗಾದ ಅನಾಸ್ ಅವರು ಚಾರು, ರವೂಫ್ ವಾಸವಿದ್ದ ಬಾಡಿಗೆ ಮನೆ ತೆರವು ಮಾಡಿಸುವಲ್ಲಿ ಮಧ್ಯಸ್ಥಿಕೆ ವಹಿಸಿದ್ದು, ಇದೆ ಸೇಡಿನಲ್ಲಿ ದಾಳಿ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅನಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.