ಮಂಗಳೂರು, ಫೆ 02(DaijiworldNews/MS): ರಾಷ್ಟ್ರೀಯ ಹೆದ್ದಾರಿ-169 (ಹಳೆಯ ರಾಷ್ಟ್ರೀಯ ಹೆದ್ದಾರಿ-13) ಮಂಗಳೂರು-ಶೋಲಾಪುರ ರಸ್ತೆಯ ಮೂಡಬಿದ್ರೆ ಪುರಸಭೆ ವ್ಯಾಪ್ತಿಯ ಕಿ.ಮೀ.712.500 (ನ್ಯೂ ಪಡಿವಾಲ್ ಹೊಟೇಲ್ ಬಳಿ) ರಲ್ಲಿ ಪ್ರವಾಹ ಹಾನಿ ದುರಸ್ತಿ ಯೋಜನೆಯಡಿ ಮೋರಿ ಪುನರ್ ನಿರ್ಮಾಣ ಕಾಮಗಾರಿಯನ್ನು ಕೈಗೊಳ್ಳುವ ಪ್ರಯುಕ್ತ ಫೆ. 02 ರಿಂದ ಮಾರ್ಚ್ 03 ರವರೆಗೆ ಎಲ್ಲಾ ವಿಧದ ವಾಹನಗಳ ಸಂಚಾರವನ್ನು ನಿರ್ಬಂಧಿ ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮೋಟಾರು ವಾಹನ ಕಾಯ್ದೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಜಿಲ್ಲಾ ದಂಡಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ.
ಪರ್ಯಾಯ ರಸ್ತೆಗಳ ವಿವರ:
• ವೇಣೂರು ಹಾಗೂ ಬಂಟ್ವಾಳದಿಂದ ಕಾರ್ಕಳಕ್ಕೆ ಹೋಗುವ ವಾಹನಗಳು: ಹನುಮಾನ್ ದೇವಸ್ಥಾನ, ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.
• ಮಂಗಳೂರು ಹಾಗೂ ಮುಲ್ಕಿ, ಕಿನ್ನಿಗೋಳಿಯಿಂದ ಕಾರ್ಕಳಕ್ಕೆ ಹೋಗುವ ವಾಹನಗಳು: ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಮೂಲಕ ಕಾರ್ಕಳ ತಲುಪಬಹುದು.
• ಮಂಗಳೂರಿನಿಂದ ಶಿರ್ತಾಡಿ-ಹೊಸ್ಮಾರ್ ಗೆ ಹೋಗುವ ವಾಹನಗಳು: ಸ್ವರಾಜ್ ಮೈದಾನ, ರಿಂಗ್ ರೋಡ್, ಅಲಂಗಾರು ಜೈನ್ ಪೇಟೆ ಮೂಲಕ ಶಿರ್ತಾಡಿ ಕಡೆಗೆ ಸಂಚರಿಸಬಹುದು.
• ಹೊಸ್ಮಾರು, ಶಿರ್ತಾಡಿಯಿಂದ ಹೋಗುವ ವಾಹನಗಳು: ಮಂಗಳೂರಿಗೆ ಅಲಂಗಾರು, ರಿಂಗ್ ರೋಡ್, ಸ್ವರಾಜ್ ಮೈದಾನದ ಮೂಲಕ ಮಂಗಳೂರಿಗೆ ಸಂಚರಿಸಬಹುದು.
• ಕಾರ್ಕಳದಿಂದ ಮಂಗಳೂರು, ಮುಲ್ಕಿ ಹಾಗೂ ಕಿನ್ನಿಗೋಳಿಗೆ ಹೋಗುವ ವಾಹನಗಳು: ಅಲಂಗಾರು- ರಿಂಗ್ ರೋಡ್-ಸ್ವರಾಜ್ ಮೈದಾನದ ಮೂಲಕ ಸಂಚರಿಸಬಹುದು.