ಬಂಟ್ವಾಳ, ಫೆ. 01 (DaijiworldNews/SM): ನೀರಿಲ್ಲದೆ ಪರದಾಡುತ್ತಿದ್ದ ಜನರಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಪುರಸಭಾ ಸದಸ್ಯರೇ ನೀರಿನ ಪೈಪ್ ಅಳವಡಿಸಿ ನೀರು ನೀಡಿದ ಘಟನೆ ಬಿ.ಸಿ.ರೋಡು ಪುರಸಭಾ ವ್ಯಾಪ್ತಿಯಲ್ಲಿ ನಡೆದಿದೆ.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಸಂಚಯಾಗಿರಿ, ಅಜ್ಜಿಬೆಟ್ಟು , ಬಿ.ಸಿ ರೋಡ್ ಭಾಗದಲ್ಲಿ ಕಳೆದ ಎರಡು ವಾರಗಳಿಂದ ನೀರಿನ ಸಮಸ್ಯೆಯಾಗಿದೆ. ಇದರಿಂದಾಗಿ ಜನರು ಕಷ್ಟ ಪಡುವಂತಾಗಿತ್ತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ಹರಿಪ್ರಸಾದ್ ರವರ್ ಸ್ವತಃ ನೀರಿನ ಪೈಪ್ ಅಳವಡಿಕೆ ಕಾರ್ಯದಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಬಿಸಿರೋಡು ಪಂಪ್ ಒಂದರ ಸಮೀಪ ನೀರಿನ ಚರಂಡಿ ಭಾಗದಲ್ಲಿ ನೇರವಾಗಿ ಪ್ರತ್ಯೇಕ ನೀರಿನ ಪೈಪ್ ಲೈನ್ ಅಳವಡಿಸಲಾಗುತ್ತಿದ್ದು ಜನರ ನೀರಿನ ಅಭಾವವನ್ನು ಶೀಘ್ರ ಸರಿ ಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತಾರಾಗಿ ಜನ ಮೆಚ್ಚುಗೆ ಪಡೆದಿದ್ದಾರೆ.
ಇವರ ಜೊತೆಯಲ್ಲಿ ಬಿ.ಜೆ.ಪಿ ಯುವಮೋರ್ಚಾ ಅಧ್ಯಕ್ಷರಾದ ಪ್ರದೀಪ್ ಅಜ್ಜಿಬೆಟ್ಟು ಬೂಡ ಸದಸ್ಯರಾದ ಭಾಸ್ಕರ್ ಕುಲಾಲ್ ಕಾಮಾಜೆ , ಪುಷ್ಪರಾಜ್ ಅಲೆತ್ತೂರು ಅವರು ಕೂಡ ನೀರಿನ ಪೈಪ್ ಲೈನ್ ಅಳವಡಿಕೆ ಕಾರ್ಯದಲ್ಲಿ ತೊಡಗಿಸಿಕೊಂಡರು.