ಬಂಟ್ವಾಳ, ಫೆ 01(DaijiworldNews/MS): ಜಿಲ್ಲೆಯ ಪ್ರಾಚೀನ ತೀರ್ಥ ಕೇತ್ರ ವಾಗಿ ಗುರುತಿಸಿಕೊಂಡ ಪುರಾಣ ಪ್ರಸಿದ್ಧ ಕಾರಿಂಜೇಶ್ವರ ದೇವಸ್ಥಾನದ ಪರಿಸರದಲ್ಲಿ ನಡೆಯುತ್ತಿರುವ ಗಣಿಗಾರಿಕೆ ಕ್ಷೇತ್ರದ ಪಾವಿತ್ರ್ಯಕ್ಕೆ ಅಪಾಯ ತರುವ ಸಾಧ್ಯತೆ ಇದೆ. ಇಲ್ಲಿನ ಕಲ್ಲುಕೋರೆಯ ಈ ಬಗ್ಗೆ ಸರ್ಕಾರ ಎಚ್ಚೆತ್ತು ಕಪ್ಪು ಕಲ್ಲು ಮತ್ತು ಜೆಲ್ಲಿ ಗಣಿಗಾರಿಕೆ ಪರವಾನಿಗೆ ರದ್ದುಗೊಳಿಸಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದ ಇವರು ಆಗ್ರಹಿಸಿದ್ದಾರೆ. ಕಾರಿಂಜ ಕ್ಷೇತ್ರ ಪಾರ್ವತಿ - ಪರಮೇಶ್ವರ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಕ್ಷೇತ್ರದ 10 ಕಿ.ಮೀ.ವ್ಯಾಪ್ತಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಬೇಕು ಎಂದು ಆಗ್ರಹಿಸಿದರು. ಪ್ರಕೃತಿ ಸಂರಕ್ಷಣೆಗೆ ಭಕ್ತರು ಸನ್ನದ್ಧರಾಗಬೇಕು ಎಂದರು. ಹಿಂದೂ ಜಾಗರಣ ವೇದಿಕೆ ಮುಖಂಡ ರಾಧಾಕೃಷ್ಣ ಅಡ್ಯಂತಾಯ ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರದ ಉಳಿವಿಗೆ ಅಮರಣಾಂತ ಉಪವಾಸ ಮತ್ತು ಶಿವ ಮಾಲಾಧಾರಣೆ ಮಾಡಲು ನಿರ್ಧರಿಸಲಾಗಿದೆ ಎಂದರು.
ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗ್ರಾಮಣಿ ವೆಂಕಟರಮಣ ಮುಚ್ಚಿನ್ನಾಯ, ಸಮಿತಿ ಸದಸ್ಯರಾದ ಪ್ರವೀಣ್ ಪೂಜಾರಿ, ಮಾಲತಿ ಯಳಚ್ಚಿತ್ತಾಯ, ಕಾವಳಮೂಡೂರು ಗ್ರಾ.ಪಂ.ಉಪಾಧ್ಯಕ್ಷ ಅಜಿತ್ ಶೆಟ್ಟಿ, ಹಿ.ಜಾ.ವೇ. ಬಂಟ್ವಾಳ ಸಮಿತಿ ಅಧ್ಯಕ್ಷ ತಿರುಲೇಶ್ ಬೆಳ್ಳೂರು, ಪ್ರಮುಖರಾದ ನರಸಿಂಹ ಮಾಣಿ, ಜಗದೀಶ ನೆತ್ತರಕೆರೆ, ಪ್ರಶಾಂತ್ ಕೆಂಪುಗುಡ್ಡೆ ,ಯೋಗೀಶ್ ಕುಮ್ಡೇಲು, ಅಜಿತ್ ಪುತ್ತೂರು, ರವಿ ಕೆಂಪುಗುಡ್ಡೆ, ತಿಲಕ್ ಬಂಟ್ವಾಳ, ನಮಿತ್ ಜೈನ್, ಶರತ್ ಮುಲ್ಕಾಜೆಮಾಡ, ಶರ್ಮಿತ್ ಜೈನ್, ಸಂತೋಷ್ ಜೈನ್, ವಕೀಲ ರಾಜೇಶ್ ಬೊಳ್ಳುಕಲ್ಲು, ಸಂಸ್ಕಾರ ಭಾರತಿ ಪ್ರಮುಖ್ ವಾಸುದೇವ ಭಟ್ ಉಡುಪಿ, ವಿಷ್ಣುಮೂರ್ತಿ ಆಚಾರ್ಯ, ವಿಷ್ಣು ಭಟ್, ಮಹೇಶ್ ಬೈಲೂರು ಇದ್ದರು.