ಬೆಳ್ತಂಗಡಿ, ಫೆ 01 (DaijiworldNews/KP): ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಕಕ್ಕೆಜಾಲು ಸುಲೈಮಾನ್ ಎಂಬುವರ ಮನೆಯಿಂದ ಕಳ್ಳತನ ಮಾಡಿದ್ದ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಬೆಳ್ತಂಗಡಿಯ ಮುಂಡಾಜೆ ಗ್ರಾಮದ ಚಿನ್ನಿಗುಡ್ಡೆ ನಿವಾಸಿ ಇಮ್ತಿಯಾಝ್ (37) ಎಂದು ಗುರುತಿಸಲಾಗಿದೆ.
ಸುಲೈಮಾನ್ ಕುಟುಂಬ ಜನವರಿ 22ರಂದು ಬೆಳಗ್ಗೆ ಮನೆಗೆ ಬೀಗ ಹಾಕಿ ಭದ್ರಾವತಿಗೆ ತೆರಳಿದ್ದು, ಜನವರಿ 23ರಂದು ರಾತ್ರಿ 9 ಗಂಟೆ ಸುಮಾರಿಗೆ ಮನೆಗೆ ವಾಪಸ್ ಬಂದು ನೋಡಿದಾಗ ಸಿಟ್ಔಟ್ನಲ್ಲಿ ಇಟ್ಟಿದ್ದ ಆಕ್ಟಿವಾ ಹಾಗೂ ಮನೆಯ ಹಂಚನ್ನು ತೆಗೆದು ಮನೆ ಒಳಗೆ ಗೋಡ್ರೇಜ್ನಲ್ಲಿದ್ದ 60 ಸಾವಿರ ಮೌಲ್ಯದ ಒಂದು ಕಿವಿಯೋಲೆ, 2 ಗ್ರಾಂ ತೂಕದ 2 ಉಂಗುರಗಳು , 1 ನೋಕಿಯಾ ಮೊಬೈಲ್, 600 ರೂ ನಗದು ಕದ್ದಿರುವುದು ಗಮನಕ್ಕೆ ಬಂದಿದ್ದು, ಕಳವಾದ ವಸ್ತುಗಳ ಒಟ್ಟು ಮೊತ್ತ 1,35,100 ರೂ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದೂರಿನ ಅನ್ವಯ ಆರೋಪಿಯನ್ನು ವಶಕ್ಕೆ ಪಡೆದು 3,500 ರೂಪಾಯಿ ನಗದು, ಒಂದು ಜೊತೆ ಕಿವಿಯೋಲೆ, ಎರಡು ಉಂಗುರಗಳು ಹಾಗೂ ಕದ್ದ ಆಕ್ಟಿವಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನು ಆರೋಪಿ ಇಮ್ತಿಯಾಜ್ನನ್ನು ಫೆಬ್ರವರಿ 1 ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.