ಕಾಸರಗೋಡು, ಜ. 30(DaijiworldNews/SM): ಜಿಲ್ಲೆಯಲ್ಲಿ ರವಿವಾರ 769 ಮಂದಿಗೆ ಕೊರೋನ ಪಾಸಿಟಿವ್ ದ್ರಢಪಟ್ಟಿದ್ದು, 547 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ ಜಿಲ್ಲೆಯಲ್ಲಿ 4,965 ಮಂದಿ ಚಿಕಿತ್ಸೆಯಲ್ಲಿದ್ದಾರೆ. 19, 568 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1, 58, 193 ಮಂದಿಗೆ ಸೋಂಕು ದೃಢಪಟ್ಟಿದ್ದು, 1,49,128 ಮಂದಿ ಗುಣಮುಖರಾಗಿದ್ದಾರೆ. ಕೇರಳದಲ್ಲಿ ರವಿವಾರ 51,570 ಮಂದಿಗೆ ಸೋಂಕು ಪತ್ತೆಯಾಗಿದೆ.