ಮಂಗಳೂರು, ಜ. 29(DaijiworldNews/SM): ವೆನ್ಲಾಕ್ ಆಸ್ಪತ್ರೆಯಲ್ಲಿ ರೋಗಿಯ ನರಳಾಟ ಸಿಬ್ಬಂದಿಯಿಂದ ವೀಡಿಯೋ ಗೇಮ್ ಆಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೋಗೆ ಸಂಬಂಧಿಸಿದಂತೆ ಸ್ನಾತಕೋತ್ತರ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲಾಗಿದೆ.
ಕರ್ತವ್ಯ ಸಮಯದಲ್ಲಿ ವೀಡಿಯೋ ಗೇಮ್ ಆಡುತ್ತಿದ್ದ ಆರೋಪ ಎದುರಾಗಿದ್ದು, ಈ ವಿಚಾರವಾಗಿ ವೆನ್ಲಾಕ್ ಆಸ್ಪತ್ರೆ ಅಧೀಕ್ಷರಿಂದ ತನಿಖೆ ನಡೆಸಲಾಗಿದೆ. ಈ ಘಟನೆ ಆಸ್ಪತ್ರೆಯಲ್ಲಿ ಜ. 23 ರಂದು ನಡೆದಿತ್ತು. ಕ್ಲಿನಿಕಲ್ ಸೇವೆ ನೀಡುತ್ತಿದ್ದ ವೈದ್ಯಕೀಯ ವಿದ್ಯಾರ್ಥಿಯಿಂದ ಕೃತ್ಯ ಎಂಬುವುದು ಸಾಬೀತಾಗಿದೆ.
ಖಾಸಗಿ ವೈದ್ಯಕೀಯ ಕಾಲೇಜಿನ ಸ್ನಾತ್ತಕೋತ್ತರ ವೈದ್ಯಕೀಯ ವಿದ್ಯಾರ್ಥಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಸೇವೆ ನೀಡುತ್ತಿದ್ದರು. ಸದ್ಯ ವಿದ್ಯಾರ್ಥಿಯನ್ನು ಅಮಾನತಿನಲ್ಲಿಡಲಾಗಿದೆ ಎಂದು ವೆನ್ಲಾಕ್ ಜಿಲ್ಲಾಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಂದ ಅಧೀಕೃತ ಮಾಹಿತಿ ಲಭ್ಯವಾಗಿದೆ.