ಸುಳ್ಯ, ಜ 28 (DaijiworldNews/HR): ಪೈಚಾರ್ನಿಂದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅಸ್ಸಾಮಿ ಮಹಿಳೆಯೊಬ್ಬರು ಕುಂದಾಪುರದಲ್ಲಿ ತನ್ನ ಪ್ರಿಯಕರ ಜೊತೆಯಲ್ಲಿ ಪತ್ತೆಯಾಗಿರುವ ಘಟನೆ ನಡೆದಿದೆ.
ಸುಳ್ಯ ಪೊಲೀಸ್ ಠಾಣೆ
ಜನವರಿ 25 ರಂದು ಪೈಚಾರ್ನಲ್ಲಿರುವ ತನ್ನ ಮನೆಯಿಂದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದದು, ಸಂಜೆಯವರೆಗೂ ಪತ್ನಿ ಹಿಂದಿರುಗುವವರೆಗೆ ಕಾದು ಕುಳಿತಿದ್ದ ಆಕೆಯ ಪತಿ ಸುಳ್ಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಪೈಚಾರ್ನಲ್ಲಿರುವ ಕಾರ್ಖಾನೆಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸಕ್ಕೆ ಸೇರಿದ ದಂಪತಿ ಪೈಚಾರ್ನಲ್ಲಿ ಬಾಡಿಗೆ ರೂಮ್ನಲ್ಲಿ ವಾಸವಿದ್ದರು.
ಮಹಿಳೆಯ ಮೊಬೈಲ್ ಫೋನ್ ಕುಂದಾಪುರ ಎಂದು ಪ್ರಸ್ತುತ ಇರುವ ಸ್ಥಳವನ್ನು ತೋರಿಸಿದ ಆಧಾರದ ಮೇಲೆ ಸುಳ್ಯ ಪೊಲೀಸರು ಪತ್ತೆ ಮಾಡಿದ್ದಾರೆ. ಇಲ್ಲಿನ ಪೊಲೀಸರು ಕುಂದಾಪುರ ಠಾಣೆಯನ್ನು ಸಂಪರ್ಕಿಸಿದ್ದು, ಮಹಿಳೆಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ತನ್ನ ಪ್ರಿಯಕರ ಅಸ್ಸಾಂ ಮೂಲದ ಚಂದನ್ ಜೊತೆಗಿದ್ದು, ಮಹಿಳೆಯ ಪತಿ ತನ್ನೊಂದಿಗೆ ಸುಳ್ಯಕ್ಕೆ ಹೋಗುವಂತೆ ಕೇಳಿದಾಗ ಅವಳು ನಿರಾಕರಿಸಿದ್ದು, ಚಂದನ್ ಜೊತೆ ವಾಸಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾಳೆ. ಆದರೆ ಆಕೆಗೆ ಕೆಲ ಸಲಹೆ ನೀಡಿದ ಪೊಲೀಸರು, ಪತಿಯೊಂದಿಗೆ ತೆರಳುವಂತೆ ಮನವೊಲಿಸಿದ್ದಾರೆ ಎನ್ನಲಾಗಿದೆ.