ಸುರತ್ಕಲ್, ಜ.27 (DaijiworldNews/KP): ಜನವರಿ 19ರಂದು ಸುರತ್ಕಲ್ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ತೆರಳಿದ್ದ ಗಂಗಾಧರ.ಬಿ.ಶೆಟ್ಟಿಗಾರ(73) ಮರಳಿ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಕಾಣೆಯಾದ ಗಂಗಾಧರ.ಬಿ.ಶೆಟ್ಟಿಗಾರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇವರು ಸಾಧಾರಣ ಮೈಕಟ್ಟು ಹೊಂದಿದ್ದು, ಉದ್ದ ಮುಖ, ಎತ್ತರ 168 ಅಡಿ, ಕೂದಲು ಕಪ್ಪು ಮತ್ತು ಬಿಳಿಯಾಗಿದ್ದು, ಕನ್ನಡ ಮತ್ತು ತುಳು ಬಾಷೆಯನ್ನು ಮಾತಾನಾಡ ಬಲ್ಲವರಾಗಿದ್ದಾರೆ ಎಂದು ತಿಳಿದು ಬಂದಿದೆ.
ಮನೆಯಿಂದ ಹೊರಡುವಾಗ ಕೇಸರಿ ಲುಂಗಿ, ಉದ್ದ ತೋಳಿನ ಕಪ್ಪು ಹಸಿರು ಮಿಶ್ರಿತ ಪ್ಲೇನ್ ಬಟ್ಟೆ ಧರಿಸಿದ್ದರು ಎಂದು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಸುರತ್ಕಲ್ ಎಸ್ಪಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಮ್ಗೆ ತಿಳಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ.
ದೂರವಾಣಿ ಸಂಖ್ಯೆ :
PS 0824-2220540
ACP : 0824-2220526, Email: sdpopanamburmgc@ksp.gov.in
C'OP: 0824-2220801,Email : compolmgc@ksp.gov.in
Chiefs Off : 22212108 Email :ff@gmail.com