ಮಂಗಳೂರು, ಜ 27 (DaijiworldNews/HR): ನಗರದ ಮಣ್ಣಗುಡ್ಡದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಗೋಕುಲ್ಧಾಮ್ ವಸತಿ ಸಮುಚ್ಚಯದಲ್ಲಿ ವಿನೂತನ ಮಾದರಿ ಫ್ಲಾಟ್ ವೀಕ್ಷಣೆಗೆ ಸಿದ್ಧವಾಗಿದ್ದು, ಜನವರಿ 26ರಂದು ಉದ್ಘಾಟನೆಗೊಂಡಿದೆ.
ಈ ಮಾದರಿ ಫ್ಲಾಟ್ನ ಉದ್ಘಾಟನೆಯನ್ನು ಜಿಎಸ್ಬಿ ಆಲ್ ಟೆಂಪಲ್ ಅಸೋಸಿಯೇಶನ್ನ ಅಧ್ಯಕ್ಷರಾದ ಸಿಎ ಜಗನ್ನಾಥ ಕಾಮತ್ರವರು ನೆರವೇರಿಸಿದ್ದು, ಈ ಸಂದರ್ಭದಲ್ಲಿ ಪ್ರವರ್ತಕರು ವಿಕ್ರಮ್ ಪೈ, ರಾಮ್ ಮೋಹನ್ ಹೆಗ್ಡೆ, ಪ್ರಾಜೆಕ್ಟ್ ಹೆಡ್ ಗುರುದತ್ತ ಶೆಣೈ ಮತ್ತಿತರು ಉಪಸ್ತಿತರಿದ್ದರು.
ನಗರದ ಮಣ್ಣಗುಡ್ಡದಂತಹ ಸ್ಥಳದಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿರುವ ಈ ವಸತಿ ಸಮುಚ್ಚಯ ಉನ್ನತ ಗುಣಮಟ್ಟದಲ್ಲಿ ನಿರ್ಮಾಣಗೊಳ್ಳುತ್ತಿದೆ. ಅಪಾರ್ಟ್ಮೆಂಟ್ನ 2 ಬೆಡ್ ರೂಮ್ ಪ್ಲಾಟ್ನ ದರ ರೂ. 68 ಲಕ್ಷ ಹಾಗೂ 3 ಬೆಡ್ ರೂಮ್ ಪ್ಲಾಟ್ನ ದರ ರೂ. 95 ಲಕ್ಷವಾಗಿರುತ್ತದೆ.
ಗೋಕುಲ್ಧಾಮ್ ಕಟ್ಟಡ ನಿರ್ಮಾಣದಲ್ಲಿನ ಗುಟ್ಟಮಟ್ಟ, ನಾವೀನ್ಯ, ಬದ್ಧತೆ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ವಿಶಿಷ್ಟವಾದ ಫ್ಲಾಟ್ಗಳು ಇಲ್ಲಿ ನಿರ್ಮಾಣಗೊಳ್ಳುತ್ತಿವೆ. ಮಣ್ಣಗುಡ್ಡ ಅತ್ಯಂತ ಹಿತವಾದ ಪರಿಸರವನ್ನು ಹೊಂದಿರುವ ಪ್ರದೇಶ. ಶಾಲೆ- ಕಾಲೇಜುಗಳು, ಶಾಪಿಂಗ್ಗೆ ಬೇಕಾದ ಅಂಗಡಿಗಳು, ಅಗತ್ಯಕ್ಕೆ ಒದಗಿ ಬರುವ ಆಸ್ಪತ್ರೆ, ಮೆಡಿಕಲ್, ವಾಯು ವಿಹಾರಕ್ಕೆ ಅನುಕೂಲಕರವಾಗಿರುವ ಉದ್ಯಾವನ ಇರುವುದರಿಂದ ಇದೊಂದು ಮಾದರಿ ವಸತಿ ಪ್ರದೇಶ. ಕೆನರಾ ಶಾಲೆ, ಕುದ್ರೋಳಿ ದೇವಸ್ಥಾನ, ಗುಜರಾತಿ ಮಂದಿರ, ಗಾಂಧಿ ಪಾರ್ಕ್, ಕಾರ್ಸ್ಟ್ರೀಟ್ ಎಂಬ ಸಾಂಸ್ಕೃತಿಕ ಪೇಟೆ, ತಣ್ಣೀರುಬಾವಿ, ಸುಲ್ತಾನ್ ಬತ್ತೇರಿ ಮುಂತಾದ ಐತಿಹಾಸಿಕ ಸ್ಥಳಗಳು ಈ ಪ್ರದೇಶಕ್ಕೆ ತುಂಬಾ ಹತ್ತಿರದಲ್ಲಿದ್ದು, ಈಗಾಗಲೇ ಸುಮಾರು ಶೇ. 90ರಷ್ಟು ಫ್ಲಾಟ್ಗಳು ಖರೀದಿಯಾಗಿದೆ.
ಗೋಕುಲ್ಧಾಮ್ ಫ್ಲ್ಯ್ಲಾಟ್ನ ಆಧುನಿಕ ಮಾದರಿಯ ಸೌಕರ್ಯಗಳು:
ಮಿನಿ ತಿಯೇಟರ್, ಇಂಟರ್ಕಾಮ್ ಮತ್ತು ಆಕ್ಸೆಸ್ ಕಂಟ್ರೋಲ್ಡ್ ಲಾಬಿ ಎಚಿಟ್ರೆನ್ಸ್, ಹವಾನಿಯಂತ್ರಿತ ಜಿಮ್ನಾಷಿಯಮ್, ಸೋಲಾರ್ ಪ್ಯಾನೆಲ್ಸ್, ಸಿಸಿ ಟಿವಿ ಕ್ಯಾಮರಾ, ಮಕ್ಕಳ ಆಟದ ತಾಣ, ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, ಎರಡು ಸ್ವಯಂಚಾಲಿತ ಲಿಫ್ಟ್, ಕಾರ್ ಪಾರ್ಕಿಂಗ್ ಮತ್ತು ಜನರೇಟರ್ ವ್ಯವಸ್ಥೆ.
ಆರಂಭದಿಂದ ಈವರೆಗೆ ಹಲವು ವಸತಿ ಯೋಜನೆಗಳನ್ನು ಮತ್ತು ವಾಣಿಜ್ಯ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಮುಕ್ತಾಯಗೊಳಿಸಿದ ಈ ಸಂಸ್ಥೆಯ ಕೈಯಲ್ಲಿ ಈಗ ಮೂರು ಯೋಜನೆಗಳು ಕಾರ್ಯಗತಿಯಲ್ಲಿವೆ. ಮಣ್ಣಗುಡ್ಡದಲ್ಲಿ ಗೋಕುಲ್ಧಾಮ್, ಕೊಟ್ಟಾರ ಚೌಕಿಯಲ್ಲಿ ಕೈಲಾಶ್, ಮತ್ತು ಕಾಪಿಕಾಡ್ನಲ್ಲಿ ಅಜಂತಾ ಎಂಬ ಬ್ಯುಸಿನೆಸ್ ಸೆಂಟರ್ ಯೋಜನೆಯ ಕೆಲಸ ಮುಂದುವರೆಯುತ್ತಿದೆ. ಶೀಘ್ರದಲ್ಲೇ ನಗರದ ಡೊಂಗರಕೇರಿ ಹಾಗೂ ದೇರೆಬೈಲ್ನಲ್ಲಿ ಹೊಸ ವಸತಿ ಸಮುಚ್ಚಯಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ನಗರದ ಕಾಪಿಕಾಡ್ನ ಸುಪ್ರಭಾತ್ ಬಿಲ್ಡಿಂಗ್ನಲ್ಲಿರುವ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆಯ ಕಛೇರಿಯನ್ನು (8861261713, 7090933900) ಸಂಪರ್ಕಿಸಬಹುದು.
ಇ ಮೇಲ್ : sales@mukundmgmrealty.com
ವೆಬ್ಸೈಟ್ : https://gokuldhamapartment.com/