ಮಂಗಳೂರು, ಡಿ08: ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಡಿ.7ರಂದು ತಮ್ಮ ಹುಟ್ಟು ಹಬ್ಬದ ಸಂಭ್ರಮವನ್ನು ಪುಟ್ಟ ಪುಟ್ಟ ಮಕ್ಕಳೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.
ಮಂಗಳೂರು ನಗರದ ಜೆಪ್ಪು ಮಾರ್ಕೆಟ್ ಸಮೀಪವಿರುವ ಭಗಿನಿ ಸಮಾಜದ ಪುಟ್ಟ ಮಕ್ಕಳೊಂದಿಗೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿದರು. ಈ ವೇಳೆ ಶಾಸಕರು ಮಕ್ಕಳೊಂದಿಗೆ ತಾನು ಮಗುವಿನಂತೆ ಬೆರೆತು ಮಕ್ಕಳ ಸಂತಸ ಸಂಭ್ರಮವನ್ನು ಇಮ್ಮಡಿಗೊಳಿಸಿದ್ದಾರೆ.
ಭಗಿನಿ ಸಮಾಜದಲ್ಲಿರುವ ಪುಟ್ಟ ಮ್ಕಕಳ ಆಸೆಯಂತೆ ಶಾಸಕರು ಮಕ್ಕಳೊಂದಿಗೆ ಕೇಕ್ ಕತ್ತರಿಸಿ ಕೆಲ ಕಾಲ ಕಳೆದರು. ತಮ್ಮ ಮುಖ್ಯ ಕಾರ್ಯಕ್ರಮ ಮತ್ತು ಒತ್ತಡಗಳ ನಡುವೆಯೂ ಮಕ್ಕಳ ಜೊತೆ ಹುಟ್ಟುಹಬ್ಬ ಆಚರಿಸಿದ್ದು ವಿಶೇಷವಾಗಿತ್ತು. ಈ ವೇಳೆ ಮಕ್ಕಳು ಶಾಸಕರಿಗೆ ಕೇಕ್ ತಿನ್ನಿಸಿ ಖುಷಿ ಪಟ್ಟರು. ಶಾಸಕರು ಕೂಡ ಮಕ್ಕಳಿಗೆ ಕೇಕ್ ತಿನ್ನಿಸಿ ತಾನೂ ಮಗುವಿನಂತೆ ಆಶ್ರಮದಲ್ಲಿ ಮಕ್ಕಳ ಜೊತೆಗಿದ್ದರು.