ಕಾರ್ಕಳ, ಜ 25 (DaijiworldNews/HR): ಕುಕ್ಕುಂದೂರು ನೆಲ್ಲಿಗುಡ್ಡೆ ಪರಿಸರದಲ್ಲಿ ಮದ್ಯವಯಸ್ಕನೊಬ್ಬ ನೇಣುಬಿಗಿದು ಆತ್ಮಹತ್ಯೆ ಗೈದಿರುವ ಘಟನೆ ನಡೆದಿದೆ.
ಮೃತಪಟ್ಟ ಮದ್ಯವಯಸ್ಕ ಅಪರಿಚಿತನಾಗಿದ್ದು, ಸುಮಾರು 45ರಿಂದ 50 ವರ್ಷ ವಯಸ್ಸಿನವನಾಗಿರುತ್ತಾನೆ. ಕಳೆದ ಮೂರು ದಿನಗಳ ಹಿಂದೆ ಈ ಕೃತ್ಯ ಎಸಗಿರಬೇಕೆಂದು ಶಂಕಿಸಲಾಗಿದೆ.
ನೆಲ್ಲಿಗುಡ್ಡೆಯಲ್ಲಿ ಅಂಗಡಿ ವ್ಯಾಪಾರ ಮಾಡುತ್ತಿದ್ದ ಯಶವಂತ ಎಂಬವರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಂಗಡಿ ಮುಂಭಾಗದಲ್ಲಿರುವ ಹಾಡಿಯಿಂದ ದುರ್ವಾಸನೆ ಬೀರುತ್ತಿದ್ದುದ್ದು ಮಾಹಿತಿ ಬೆಳಕಿಗೆ ಬರಲು ಕಾರಣವಾಗಿದೆ.
ಈ ಕುರಿತು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ.