ಮಂಗಳೂರು, ಜ 25 (DaijiworldNews/HR): ಕರಾವಳಿ ಭಾಗದಲ್ಲಿ ಹಿಜಾಬ್ ವಿವಾದ ನಡೆಯುತ್ತಿದ್ದು, ಇದರಲ್ಲಿ ರಾಜಕೀಯ ಮಾಡಬಾರದು, ಸ್ಥಳೀಯವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಹಿಜಾಬ್ ವಿವಾದವೊಂದು ಸಣ್ಣ ವಿಚಾರ, ವಿದ್ಯಾರ್ಥಿಗಳ ಪೋಷಕರು ಮತ್ತು ಶಿಕ್ಷಣ ಸಂಸ್ಥೆ ಕುಳಿತು ಬಗೆಹರಿಸಿಕೊಳ್ಳಬೇಕು. ಇಲ್ಲಿ ವಿದ್ಯಾರ್ಥಿನಿಯರ ವಿದ್ಯಾಬ್ಯಾಸ ಮುಖ್ಯವಾಗಿರುತ್ತೆ. ಇದರಲ್ಲಿ ರಾಜಕೀಯ ಮಾಡಬಾರದು, ಸ್ಥಳೀಯವಾಗಿ ಈ ಸಮಸ್ಯೆ ಬಗೆಹರಿಸಿಕೊಳ್ಳಬೇಕು" ಎಂದರು.
"ಪಾಕಿಸ್ತಾನದ ವಿಚಾರ ತಂದು ಕಾಮೆಂಟ್ ಮಾಡೋದು ಅಪ್ರಸ್ತುತ. ಪಾಕಿಸ್ಥಾನದಂತಹ ಪರಿಸ್ಥಿತಿ ಇಲ್ಲಿ ಇಲ್ಲ. ಅಲ್ಲಿ ಶಾಲೆಗೆ ಹೋಗಿ ಚಿಕ್ಕ ಮಕ್ಕಳಿಗೆ ಗುಂಡು ಹೊಡೆಯುತ್ತಾರೆ, ಅಂತಹ ಪರಿಸ್ಥಿತಿ ಇಲ್ಲಿ ಇಲ್ಲ. ಅಷ್ಟಕ್ಕೂ ಈ ವಿಚಾರ ನನ್ನ ಬಳಿ ಯಾರೂ ತಂದಿಲ್ಲ" ಎಂದಿದ್ದಾರೆ.
ಇನ್ನು "ಕ್ಯಾಂಪಸ್ ಒಳಗೆ ಹೋದ ವಿದ್ಯಾರ್ಥಿಗಳ ಬಗ್ಗೆ ವಿದ್ಯಾರ್ಥಿ ಸಂಘಟನೆ ಚಿಂತಿಸಬೇಕಿಲ್ಲ. ವಿದ್ಯಾರ್ಥಿಗಳು ಯಾರಿಗೆ ಶಾಲೆಗೆ ಹೋಗಲು ಸಾಧ್ಯವಿಲ್ಲ ಅವರ ಬಗ್ಗೆ ಯೋಚನೆ ಮಾಡಿ ಎಂದು ಹೇಳಿದ್ದಾರೆ.