ಕಾರ್ಕಳ, ಜ 25 (DaijiworldNews/HR): ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಶ್ರೀದೇವಿಯ ಪಾತ್ರ ಮಾಡುವ ಮೂಲಕ ಜನಮನ್ನಣೆಗೆ ಪಾತ್ರರಾದ ಮುಳಿಯಾಲ ಭೀಮ ಭಟ್(85) ಕಾರ್ಕಳ ತಾಲೂಕಿನ ಕಾಂತಾವರ ರಥಬೀದಿಯ ರೂಮ್ವೊಂದರಲ್ಲಿ ನಿಧನರಾಗಿದ್ದಾರೆ.
ಶ್ರೀದೇವಿಯ ಪಾತ್ರ ಮಾತ್ರವಲ್ಲ, ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂಥ ಗಂಡುಗತ್ತಿನ ಪಾತ್ರಗಳು,ಸೀತೆ, ದಮಯಂತಿ, ಚಂದ್ರಮತಿ, ದ್ರೌಪತಿಯಲ್ಲದೇ ಪುರುಷ ಪಾತ್ರಗಳಾದ ಅತಿಕಾಯ, ತಾಮ್ರಧ್ವಜ, ಕರ್ಣ, ಧ್ರಪದ, ಕೃಷ್ಣ, ಹನುಮಂತ ಹೀಗೆ ಹತ್ತು ಹಲವು ಪಾತ್ರಗಳನ್ನು ಯಶಸ್ಸಿಯಾಗಿ ನಿರ್ವಹಿಸಿದ್ದರು.
ಯಕ್ಷರಂಗದಿಂದ ದೂರ ಉಳಿದ ಬಳಿದ ಅವರು ಕಾಂತಾವರ ಶ್ರೀ ಕಾಂತೇಶ್ವರ ಶ್ರೀ ಕ್ಷೇತ್ರದಲ್ಲಿ ಸೇವಾ ಚೀಟಿ ವಿಭಾಗದಲ್ಲಿ ಹಲವು ವರ್ಷಗಳಿಂದ ದುಡಿದ ಅನುಭವ ಅವರಿಗಿತ್ತು.
ಕಳೆದ ಐದು ತಿಂಗಳ ಹಿಂದೆ ಅವರು ಬಿದ್ದ ಪರಿಣಾಮ ಸೊಂಟಭಾಗದಲ್ಲಿ ತೀವ್ರತರದಲ್ಲಿ ಗಾಯಉಂಟಾಗಿ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದರು. ಆ ನಂತರ ದುಡಿಯಲು ಅಸಾಧ್ಯವಾಗಿ ಹಾಸಿಗೆ ಹಿಡಿದಿದ್ದರು.
ಕಾಂತಾವರ ಶ್ರೀ ಕ್ಷೇತ್ರದ ವತಿಯಿಂದಲೇ ಆಡಳಿತ ಮೊಕ್ತೇಸರ ಡಾ. ಜೀವಂಧರ ಬಲ್ಲಾಳ್ ಮಾರ್ಗದರ್ಶನದಲ್ಲಿ ಅವರಿಗೆ ಎಲ್ಲಾ ರೀತಿಯಲ್ಲಿ ನೆರವು ನೀಡಲಾಗಿತ್ತು.