ಮಂಗಳೂರು, ಜ. 24 (DaijiworldNews/SM): ಹರಿಕೃಷ್ಣ ಬಂಟ್ವಾಳ್ ವಿರುದ್ಧ ಸತ್ಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದ್ದಾರೆ. ಜನಾರ್ದನ ಪೂಜಾರಿಯವರೊಂದಿಗೆ ರಾಜಕೀಯವಾಗಿ ಬೆಳೆದು ಅವರಿಂದ ಸಂಪೂರ್ಣ ಲಾಭವನ್ನು ಪಡೆದು ಇದೀಗ ಅವರಿಗೆ ವಯಸ್ಸಾಗಿದೆ ಎನ್ನುವ ಕಾರಣಕ್ಕೆ ಅವರನ್ನು ಅರ್ಧ ನೀರಿನಲ್ಲಿ ಕೈಬಿಟ್ಟು ಹೋಗಿದ್ದಾರೆ ಎಂದು ಸತ್ಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದ್ದಾರೆ.
ಜಿಲ್ಲೆಯ ಪ್ರಶ್ನಾತೀತ ನಾಯಕನಿಗೆ ಇಂದು ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ರಾಜಕೀಯವಾಗಿ ಬೆಳವಣಿಗೆ, ಲಾಭ ಪಡೆದು ಅದೇ ನಾಯಕನಿಗೆ ಇದೀಗ ಪ್ರಶ್ನೆ ಮಾಡುತ್ತಾರೆ. ಅಲ್ಲದೆ ಯಾತ್ರೆ ಕೈಬಿಡುವಂತೆ ಒತ್ತಾಯಿಸಿದ್ದಾರೆ. ಉಸ್ತುವಾರಿ ಸಚಿವರನ್ನು ಕರೆದೊಯ್ದು ಹೇಳಿಕೆ ನೀಡುವ ಯತ್ನ ಮಾಡಿದ್ದಾರೆ. ಈ ಹಂತದಲ್ಲೂ ಜರ್ನಾರ್ದನ ಪೂಜಾರಿಯನ್ನು ಮತ್ತೆ ಇಕ್ಕಟ್ಟಿಗೆ ಸಿಲುಕಿಸಲು ಯತ್ನ ಮಾಡಲು ಯತ್ನಿಸುತ್ತಿದ್ದಾರೆ.
ಪೂಜಾರಿಗಳ ಹಲವು ವರ್ಷ ಜೊತೆಗಿದ್ದು ನಡು ನೀರಲ್ಲಿ ಕೈಬಿಟ್ಟಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ವಿರುದ್ಧ ಸಯಜಿತ್ ಸುರತ್ಕಲ್ ವಾಗ್ದಾಳಿ ನಡೆಸಿದ್ದಾರೆ.