ಮಂಗಳೂರು, ಜ 24 (DaijiworldNews/KP): ಮಂಗಳೂರು, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಮಂಗಳೂರಿನ ಭರತನಾಟ್ಯ ಕಲಾವಿದೆ ರೆಮೊನಾ ಇವೆಟ್ಟಾ ಪರೇರಾ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಸೋಮವಾರ ಜಿಲ್ಲಾ ಪಂಚಾಯತ್ನಲ್ಲಿ ಸ್ವೀಕರಿಸಿದರು.
ಕಳೆದ ಎಂಟು ವರ್ಷಗಳಿಂದ ಮನೋಜ್ ಕರಿಪಳ್ಳ ಮತ್ತು ಸಂಧ್ಯಾ ಕೆ ಮಾರ್ಗದರ್ಶನದಲ್ಲಿ ಸೆಮಿ-ಕ್ಲಾಸಿಕಲ್ ನೃತ್ಯ ಕಲಿಯುತ್ತಿರುವ ಇವರು ಕಂಟೆಂಪರರಿ, ವೆಸ್ಟರ್ನ್ ನೃತ್ಯವನ್ನು ಪ್ರಮೋದ್ ಕೋಡಿಕಲ್, ಪ್ರೀತೇಶ್ ಕುಮಾರ್ ಮತ್ತು ನಿಕಿ ಪಿಂಟೋರವರಿಂದ ತರಬೇತಿ ಪಡೆಯುವುದರ ಜೊತೆಗೆ ಕುಚಿಪುಡಿ, ಕಥಕ್, ಜಾನಪದ, ಯಕ್ಷಗಾನ ಇನ್ನಿತರ ನೃತ್ಯ ಪ್ರಕಾರಗಳನ್ನು ಮೈಗೂಡಿಸಿಕೊಂಡಿರುವ ಇವರು ಹಲವರು ಕಡೆಗಳಲ್ಲಿ ತನ್ನ ನೃತ್ಯದ ಚಾಪನ್ನು ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗ್ಲಾಡಿಸ್ ಸೆಲಿನ್ ಮತ್ತು ದಿವಂಗತ ಎವರೆಸ್ಟ್ ಪಿರೇರಾ ದಂಪತಿಗಳ ಮಗಳಾದ ರೆಮೊನಾ ಇವೆಟ್ಟಾ ಪರೇರಾರವರಿಗೆ ರೊನಾಲ್ಡೊ ರಾಕ್ಸನ್ ಎಂಬ ಕಿರಿಯ ಸಹೋದರಿಯು ಇದ್ದು, ಇವರು ಪ್ರಸ್ತುತ ನಂತೂರಿನ ಪದವು ಪಿಯು ಕಾಲೇಜಿನಲ್ಲಿ ಶಿಕ್ಷಣ ಪಡೆಯುತಿದ್ದಾರೆ.
2019 ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ ಇವರು ಲೆಕ್ಕವಿಲ್ಲದಷ್ಟು ಸ್ಟೇಜ್ ಶೋಗಳನ್ನು ನೀಡಿದ್ದು, ನೂರಕ್ಕೂ ಹೆಚ್ಚಿನ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಕೊರೊನಾ ಕಾರಣದಿಂದ ನಾನು ನವದೆಹಲಿಯಲ್ಲಿ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದ ನಡೆಸಲು ಸಾಧ್ಯವಾಗಲಿಲ್ಲ, ಇನ್ನು ತಾನು ಕಲಾ ಪ್ರಕಾರವನ್ನು ಆಯ್ಕೆ ಮಾಡಲು ಸ್ಫೂರ್ತಿ ಏನು ಮತ್ತು ಎದುರಿಸಿದ ಸವಾಲುಗಳ ಬಗ್ಗೆ ರೆಮೊನಾ ಇವೆಟ್ಟಾ ಪರೇರಾರವರು ವಿಡಿಯೋ ಸಂವಾದದಲ್ಲಿ ತಿಳಿಸಿದರು.
ಇನ್ನು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ್ ಪ್ರಶಸ್ತಿಯನ್ನು ಪಡೆದ ರಾಜ್ಯದ ಏಕೈಕ ಬಾಲಕಿ ಎಂಬ ಹಿರಿಮೆಗೆ ಇವರು ಭಾಜನರಾಗಿದ್ದಾರೆ, ನರೇಂದ್ರ ಮೋದಿಯವರು ನವದೆಹಲಿಯಿಂದ ಡಿಜಿಟಲ್ ಮಾದ್ಯಮದ ಮೂಲಕ 1 ಲಕ್ಷ ರೂ ನಗದು ಹಾಗೂ ಪ್ರಮಾಣಪತ್ರವನ್ನು ವಿತರಿಸಿದರು.