ಮಂಗಳೂರು, ಜ. 23 (DaijiworldNews/SM): ಇಲ್ಲಿನ ಜಪ್ಪು ಮುಹಿಯ್ಯುದ್ದೀನ್ ಜುಮ್ಹಾ ಮಸೀದಿಯಲ್ಲಿ ಕಳ್ಳತನ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತಡ ರಾತ್ರಿ ವ್ಯಕ್ತಿಯೋರ್ವ ಮಸೀದಿ ಗೇಟನ್ನು ಹಾರಿ ಮಸೀದಿ ಆವರಣ ಪ್ರವೇಶಿಸಿದ್ದು, ಬಳಿಕ ಅಲ್ಲಿದ್ದ ಕಾಣಿಕೆ ಡಬ್ಬಿ ಕಳವು ಮಾಡಿದ್ದಾನೆ. ಈ ಎಲ್ಲಾ ದೃಶ್ಯಗಳು ಮಸೀದಿಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನದ ಬಗ್ಗೆ ಮಸೀದಿ ಆಡಳಿತ ಮಂಡಳಿ ಕಾರ್ಯದರ್ಶಿ ಮುಝಮ್ಮಿಲ್ ಹುಸೈನ್ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.