ಕಾರ್ಕಳ, ಜ. 23 (DaijiworldNews/SM): ಕಾಂತಾವರದ ಕುಕ್ಕಟ್ಟೆ ಪರಿಸರದಲ್ಲಿ ಅಸ್ವಸ್ಥಗೊಂಡಿದ್ದ ಚಿರತೆ ಮರಿಯೊಂದನ್ನು ಮೂಡುಬಿದಿರೆಯ ಅರಣ್ಯ ಇಲಾಖಾ ತಂಡ ವಶಕ್ಕೆ ತೆಗೆದುಕೊಂಡು, ರಕ್ಷಣೆ ಮಾಡಿದೆ.
ರವಿವಾರ ಮಧ್ಯಾಹ್ನ ಸುಮಾರು 2.30ರಿಂದ 3ಗಂಟೆಯೊಳಗೆ ಮೂಡುಬಿದಿರೆಯ ಅರಣ್ಯ ಇಲಾಖಾ ತಂಡವು ನಡೆಸಿದ ಕಾರ್ಯಚರಣೆಯಲ್ಲಿ ಚಿರತೆಯನ್ನು ಸೆರೆಹಿಡಿಯುವಲ್ಲಿ ಯಶಸ್ಸು ಕಂಡಿದೆ.
ಚಿರತೆ ಮರಿ ಒಂದು ವರ್ಷ ಪ್ರಾಯದಾಗಿದ್ದು, ಚಟುವಟಿಕೆಯಲ್ಲಿ ಕ್ಷೀಣಿಸಿಕೊಂಡಿತ್ತು. ಮೂಡಬಿದಿರೆ ಅರಣ್ಯ ಇಲಾಖಾ ಕಚೇರಿಯ ಆವರಣದಲ್ಲಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರಿನಿಂದ ತೆರಳಿದ ಡಾ.ಯಶಸ್ಸು ನಾರಾವಿ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡಿದ್ದಾರೆ.
ಕಾಂತಾವರ ಪರಿಸರದಲ್ಲಿ ಆಗಿಂದಾಗೆ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಕೆಲ ವರ್ಷ ಹಿಂದೆಯಷ್ಟೇ ಚಿರತೆಯೊಂದನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿದಿದ್ದರು. ಮೂಡಬಿದಿರೆ ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಗಟ್ಟಿ, ಅರಣ್ಯ ರಕ್ಷಕರಾದ ಶಂಕರ್, ಕ್ಷೇಮಾಭಿವೃದ್ಧಿಕಾರಿಗಳಾದ ದಿವಾಕರ ರೈ,ಸುಧಾಕರ , ನಾರಾಯಣ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮಸ್ಥರು ಸಹಕರಿಸಿದರು.