ಮಂಗಳೂರು, ಜ 23 (DaijiworldNews/KP): ಬೆಂಗಳೂರು ಸಮೀಪದ ಕುಣಿಗಲ್ ರಸ್ತೆಯಲ್ಲಿ ಮರ ತುಂಬಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಅಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.
ಮೃತರನ್ನು ಜೋಯಲ್ ಟೆರೆನ್ಸ್ ಫೆರ್ನಾಂಡಿಸ್ (28) ಎಂದು ಗುರುತಿಸಲಾಗಿದ್ದು, ಕಾರಿನಲ್ಲಿದ್ದ ರಾಯನ್ ಡಿಕೋಸ್ಟಾ (42), ಡೆಂಜಿಲ್ ಪೈಸ್ (27), ಪ್ರವೀಣ್ ಮೊರಾಸ್ (44) ಮತ್ತು ಫ್ರಾನ್ಸಿಸ್ ಮೊರಾಸ್ (59) ಗಾಯಗೊಂಡಿದ್ದು, ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ನಡೆದಾಗ ಅದೇ ದಾರಿಯಲ್ಲಿ ಸಾಗುತಿದ್ದ ಕರ್ವೇಲ್ ಶರೀಫ್ರವರು ತಮ್ಮ ಸೋದರ ಸಂಬಂಧಿ ರಿಫಾಯಿ ಎಂಬುವರಿಗೆ ಕಳುಹಿಸಿದ ಧ್ವನಿ ಸಂದೇಶದಲ್ಲಿ ರಾತ್ರಿ 7.15ರ ಸುಮಾರಿಗೆ ಬೆಂಗಳೂರು-ಉಪ್ಪಿನಂಗಡಿಯ ಕುಣಿಗಲ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಕಾರು ಮರವನ್ನು ಸಾಗಿಸುತ್ತಿದ್ದ ಟ್ರಾಕ್ಟರ್ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಹೊರಗೆ ಕುಳಿತಿದ್ದರು, ನಾವಿಬ್ಬರೂ ಅವರ ಸಹಾಯಕ್ಕೆ ಧಾವಿಸಿದೆವು. ಆದರೆ ಆಂಬ್ಯುಲೆನ್ಸ್ ತಡವಾಗಿ ಬಂದಿದ್ದರಿಂದ, ಗಾಯಾಳುಗಳನ್ನು ಕುಣಿಗಲ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತು. ಅವರಿಗೆ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬೆಂಗಳೂರಿಗೆ ಸ್ಥಳಾಂತರಿಸಲು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ನಂತರ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದೇವು ಎಂದು ಹೇಳಿದರು.
ಇನ್ನು ಗಾಯಾಳುಗಳನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ದಾಖಲಿಸಿ ಸ್ಥಳದಲ್ಲಿ ಬಿದ್ದಿದ್ದ ಆಭರಣಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿ ನಮಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಮೊಹಮ್ಮದ್ ಷರೀಫ್ ಮತ್ತು ರಿಫಾಯಿಯವರಿಗೆ ಗಾಯಳುಗಳ ಕುಟುಂಬ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ.