ಮಂಗಳೂರು, ಜ 23 (DaijiworldNews/HR): ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಸಮೀಪದ ಕಾಪಿಕಾಡ್ ಎಂಬಲ್ಲಿ ಕಾರಿಗೆ ಢಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಭಾರೀ ಗಾತ್ರದ ಕಾರುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯೊಂದು ರಸ್ತೆ ಬದಿಯ ಕಮರಿಗೆ ಚಲಾಯಿಸಿದ ಘಟನೆ ನಡೆದಿದೆ.
ಯಾವುದೇ ಸೂಚನೆಯನ್ನು ನೀಡದೆ ಹೆದ್ದಾರಿಯಲ್ಲಿ ತಿರುವು ಪಡೆದ ಕಾರು ಚಾಲಕನ ಪ್ರಾಣ ಕಾಪಾಡಲು ಟ್ರಕ್ ಚಾಲಕ ಪ್ರಯತ್ನಿಸಿದಾಗ ಲಾರಿಯೊಂದು ರಸ್ತೆ ಬದಿಯ ಕಮರಿಗೆ ಚಲಾಯಿಸಿದೆ.
ಸಿಸಿಟಿವಿ ದೃಶ್ಯಾವಳಿಯಲ್ಲಿ ಕಾರ್ ಡ್ರೈವರ್ ಯಾವುದೇ ಸಿಗ್ನಲ್ ನೀಡದೆ ಎಡಕ್ಕೆ ಹಠಾತ್ ತಿರುವು ತೆಗೆದುಕೊಂಡಾಗ ಕಂಟೈನರ್ ಟ್ರಕ್ ಚಾಲಕ ತನ್ನ ವಾಹನದ ನಿಯಂತ್ರಣವನ್ನು ಕಳೆದುಕೊಂಡಿರುವುದು ಸೆರೆಯಾಗಿದೆ.
ಇನ್ನು ನಾಗುರಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಕ್ರೇನ್ ಮೂಲಕ ಟ್ರಕ್ ಅನ್ನು ಮೇಲೆತ್ತುವವರೆಗೂ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚಾರಕ್ಕೆ ತೊಂದರೆಯಾಗಿತ್ತು.
ಕಂಟೈನರ್ ಟ್ರಕ್ ಮುಂಬೈನಿಂದ ಕಾಸರಗೋಡಿಗೆ ಹುಂಡೈ ಕಾರುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ.