ಮಂಗಳೂರು, ಜ 22(DaijiworldNews/MS): ಪತಿಯೊಂದಿಗೆ ಕುದ್ರೋಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹಿಳೆಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಸೂಫಿಯಾ ಬೇಗಂ ಎಂದು ಗುರುತಿಸಲಾಗಿದೆ.
ಪತಿಯೊಂದಿಗೆ ಕುದ್ರೋಳಿಯಲ್ಲಿರುವ ಬಾಡಿಗೆ ಮನೆಯಲ್ಲಿ ಕಳೆದ 5 ತಿಂಗಳಿನಿಂದ ಸೂಫಿಯಾ ಬೇಗಂ ವಾಸವಾಗಿದ್ದೂ ಪತಿ ಪೈಂಟಿಂಗ್ ವೃತ್ತಿ ಮಾಡುತ್ತಿದ್ದರೆ ಪತ್ನಿ ಮನೆಯಲ್ಲೇ ಇರುತ್ತಿದ್ದರು.
ಗುರುವಾರ ರಾತ್ರಿ ಸೂಫಿಯಾ ಬೇಗಂ ಮತ್ತು ಅವರ ಪತಿ ಊಟ ಮಾಡಿ ಮಲಗಿದ್ದರು. ಮರುದಿನ ಮುಂಜಾನೆ 4 ಗಂಟೆಗೆ ಎದ್ದು ದಂಪತಿಗಳು ಅಡುಗೆ ಕೆಲಸ ಮಾಡಿ ಮತ್ತೆ ಮಲಗಿದ್ದಾರೆ. ಆದರೆ, ಪತಿಗೆ ಬೆಳಿಗ್ಗೆ 7.45 ಕ್ಕೆ ಎಚ್ಚರವಾದಾಗ ಪತ್ನಿ ಅದೇ ಕೊಣೆಯ ಕಿಟಕಿಯ ಸರಳಿಗೆ ಚೂಡಿದಾರದ ಶಾಲನ್ನು ಕುತ್ತಿಗೆಗೆ ಕಟ್ಟಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟಿದ್ದರು.ಈ ಬಗ್ಗೆ ಪತಿ ನೀಡಿದ ದೂರಿನಂತೆ ಮಂಗಳೂರು ಉತ್ತರ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.