ಬಂಟ್ವಾಳ, ಅ 17: ಬಂಟ್ವಾಳ ತಾಲೂಕಿನ ಮೂರು ಪೋಲೀಸ್ ಠಾಣೆಗಳ ಎಸೈಗಳನ್ನು ಬದಲಾವಣೆ ಮಾಡುವ ಮೂಲಕ ಇಲಾಖೆಯಲ್ಲಿ ಮೇಜರ್ ಸರ್ಜರಿಯನ್ನು ಸರಕಾರ ಮಾಡಿದೆ.
ಬಂಟ್ವಾಳ ನಗರ ಪೋಲೀಸ್ ಠಾಣೆಯ ಎಸ್ಐಯನ್ನು ಮಂಗಳೂರಿನ ಡಿಎಸ್.ಪಿ ಕಚೇರಿಗೆ, ನಗರ ಠಾಣಾ ಅಪರಾದ ವಿಭಾಗದ ಎಸ್.ಐ ಅಗಿದ್ದ ಗಂಗಾದರಪ್ಪ ಅವರನ್ನು ನೂತನವಾಗಿ ನಿರ್ಮಾಣವಾಗುವ ಬೆಳ್ತಂಗಡಿ ಟ್ರಾಫಿಕ್ ಪೋಲೀಸ್ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ ಉಮೇಶ್ ಅವರನ್ನು ಮಂಗಳೂರು ಡಿಸಿಬಿ ಕಚೇರಿಗೆ ಮತ್ತು ಟ್ರಾಫಿಕ್ ಪೋಲೀಸ್ ಠಾಣೆಯ ಎಸ್.ಐ.ಚಂದ್ರಶೇಖರ್ ಅಯ್ಯ ಅವರನ್ನು ಡಿಎಸ್.ಎ ಮಂಗಳೂರು ಕಛೇರಿಗೆ ವರ್ಗಾವಣೆ ಮಾಡಲಾಗಿದೆ.
ತೆರವಾದ ಬಂಟ್ವಾಳ ನಗರ ಠಾಣೆಗೆ ಸುಳ್ಯದಲ್ಲಿ ಎಸ್.ಐ.ಆಗಿದ್ದ ಚಂದ್ರಶೇಖರ್, ಪ್ರೊಬೆಷನರಿ ಅವಧಿ ಮುಗಿದು ನೂತನವಾಗಿ ನೇಮಕವಾಗಿದ್ದ ಮೂರು ಅಧಿಕಾರಿಗಳನ್ನು ಕ್ರಮವಾಗಿ ನಗರ ಠಾಣಾ ಅಪರಾಧ ವಿಭಾಗಕ್ಕೆ ಹರೀಶ್ , ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರಸನ್ನ ಮತ್ತು ಟ್ರಾಫಿಕ್ ಪೋಲೀಸ್ ಠಾಣೆಗೆ ಯಲ್ಲಪ್ಪ ಅವರನ್ನು ನೇಮಕ ಮಾಡಲಾಗಿದೆ.
ಬಂಟ್ವಾಳ ನಗರ , ಗ್ರಾಮಾಂತರ ಮತ್ತು ಟ್ರಾಫಿಕ್ ಪೋಲೀಸ್ ಠಾಣೆಯ ಉಪನೀರಿಕ್ಷಕರುಗಳನ್ನು ಬದಲಾವಣೆ ಮಾಡಿ ಹೊಸ ಮುಖಗಳನ್ನು ತಾಲೂಕಿಗೆ ಪರಿಚಯಿಸುವ ಕೆಲಸ ಮಾಡಿದೆ. ಕೋಮು ಗಲಾಟೆಯಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಬಂಟ್ವಾಳಕ್ಕೆ ಏಕಾಏಕಿ ವರ್ಗಾವಣೆ ಮತ್ತೊಂದು ಶಾಕ್ ನೀಡದಂತಾಗಿದೆ.
ವಿಧಾನ ಸಭಾ ಚುನಾವಣೆಯ ಕಾವು, ಮರಳು ಮಾಫಿಯ ನಿರಂತರ ಪ್ರತಿಭಟನೆಯ ಬಿಸಿ ಮತ್ತು ಕೋಮು ಗಲಾಟೆಯ ಜೊತೆಯಲ್ಲಿ ರಾಜಕೀಯದ ಒಂದಷ್ಟು ಗಜಿಬಿಜಿಯ ಮಧ್ಯೆಯಲ್ಲಿ ಕೆಲಸ ಮಾಡಲು ಶಕ್ತವಾದ ಖಾಕಿ ಪಡೆಗಳನ್ನು ಆರಿಸಿ ತರಲಾಗಿದೆ ಎನ್ನುವ ಯೋಚನೆ ಸಾರ್ವಜನಿಕರಲ್ಲಿ ಮೂಡಿದೆ. ಸಾಕಷ್ಟು ಒತ್ತಡವಿರುವ ಬಿ.ಸಿರೋಡಿನಲ್ಲಿ ಕೆಲಸ ಮಾಡಲು ಬಿಸಿರಕ್ತದ ಯುವ ಪಡೆಗಳ ತಂಡ ಕೆಲಸ ಮಾಡಲು ಮುಂದೆ ಬಂದಿರುವುದು ಸಾರ್ವಜನಕರಲಲಿ ವಿಶ್ವಾಸ ಮೂಡಿದೆ.
ಇತ್ತೀಚೆಗೆ ನಡೆದ ಕೋಮು ಗಲಬೆಗೆ ಸಂಬಂದಿಸಿದಂತೆ ಬಂಟ್ವಾಳಕ್ಕೆ ಆಗಮಿಸಿದ್ದ ಪೋಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಮೇಜರ್ ಸರ್ಜರಿಯನ್ನು ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಡಾಧಿಕಾರಿ ಭೂಷಣ್ ಜಿ.ಬೊರಸೆಯವರನ್ನು ಆರಂಭದಲ್ಲಿ ವರ್ಗಾವಣೆ ಮಾಡಿದ ಬಳಿಕ ಬಂಟ್ವಾಳ ಡಿ.ವೈಎಸ್.ಪಿ ರವೀಸ್ ಮತ್ತು ಬಂಟ್ವಾಳ ಸರ್ಕಲ್ ಇನ್ಸ್ಪೆಕ್ಟರ್ ಮಂಜಯ್ಯ ಮತ್ತು ಮಂಗಳೂರು ಐ.ಜಿ. ಹರಿಶೇಖರನ್ನು ಅವರನ್ನು ವರ್ಗಾವಣೆ ಮಾಡಿತ್ತು.