ಕಾರ್ಕಳ, ಜ. 21 (DaijiworldNews/SM): ಆರಾಧ್ಯ ದೈವ ಕೊರಗಜ್ಜ ದೈವದ ವೇಷ ತೊಟ್ಟು ಅವಮಾನ ಮಾಡಿರುವ ಘಟನೆ ಕಾರ್ಕಳದ ಈದುವಿನಲ್ಲಿ ನಡೆದಿದೆ.
ಈದುವಿನ ರವೀಂದ್ರ ಎಂಬ ವ್ಯಕ್ತಿ ಕೊರಗಜ್ಜಗೆ ಅವಮಾನ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕೊರಗಜ್ಜನ ವೇಷ ತೊಟ್ಟು ಅವಮಾನಗೊಳಿಸಿ, ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ವಿಕೃತಿ ಮೆರೆದಿದ್ದಾನೆ. ಜ. 18ರಂದು ಕೊರಗಜ್ಜ ದೈವದ ವೇಷ ಹಾಕಿ ರವೀಂದ್ರ ಅವಮಾನಗೈದಿದ್ದ.
ರವೀಂದ್ರನ ಮನೆಗೆ ಕಾರ್ಕಳ ಪೊಲೀಸರು ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ರವೀಂದ್ರ ಯಕ್ಷಗಾನ ಮೇಳವೊಂದರಲ್ಲಿ ದುಡಿಯುತ್ತಿರುವ ಬಗ್ಗೆ ಸದ್ಯ ಮಾಹಿತಿ ಲಭಿಸಿದೆ.