ಕಾಸರಗೋಡು, ಜ 21 (DaijiworldNews/HR): ಕುಂಬಳೆ ಶಿರಿಯ ಹೊಳೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದ ಐದು ದೋಣಿಗಳನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುಂಬಳೆ ಪಿ.ಕೆ ನಗರಕ್ಕೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದಾಗ ಲಭಿಸಿದ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದ್ದಾರೆ.
ಇನ್ನು ಐದು ದೋಣಿಗಳನ್ನು ವಶಪಡಿಸಿ ಬಳಿಕ ಜೆಸಿಬಿ ಬಳಸಿ ಪುಡಿಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ.