ಉಡುಪಿ, ಜ 20 (DaijiworldNews/MS): ಜಿಲ್ಲೆಯಲ್ಲಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಹಿಜಬ್ ಹಕ್ಕಿಗಾಗಿ ಕಾಲೇಜಿನ 8 ಮುಸ್ಲಿಂ ವಿದ್ಯಾರ್ಥಿನಿಯರು ಹೋರಾಟ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜಿಗೆ ಹಿಂದೂ ಜಾಗರಣಾ ವೇದಿಕೆ ಭೇಟಿ ನೀಡಿದ್ದು, ಶಾಲೆ ಕಾಲೇಜಿನಲ್ಲಿ ಸಮವಸ್ತ್ರ, ಸಮಾನತೆ ಇರಬೇಕು. ಬುರ್ಖಾ, ಟೋಪಿ ಕೇಳಿ ಮುಂದೆ ಷರಿಯತ್ ಕಾನೂನು ಕೇಳುತ್ತಾರೆ ಕೊಡುತ್ತೀರಾ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.
" ಉಡುಪಿಯ ಶೈಕ್ಷಣಿಕ ಖ್ಯಾತಿ ಕುಗ್ಗಿಸಲು ಷಡ್ಯಂತ್ರ ನಡೆಯುತ್ತಿದೆ ,ಇಲ್ಲಿನ ಶೈಕ್ಷಣಿಕ ವಾತಾವರಣ ಕೆಡಿಸಲು ಹಿಂದು ಜಾಗರಣಾ ವೇದಿಕೆ ಬಿಡುವುದಿಲ್ಲ.ದೇಶದ ಮಾನ ಹರಣಕ್ಕೆ ಅಂತಾರಾಷ್ಟ್ರೀಯ ಷಡ್ಯಂತ್ರ ನಡೆಯುತ್ತಿದೆ. ಸರ್ಕಾರ ಜಾತಿ ಮತ ಧರ್ಮದ ಎಲ್ಲೆ ಮೀರಲು ಸಮವಸ್ತ್ರ ತಂದಿದೆ. ವೈಯಕ್ತಿಕ ಸ್ವಾತಂತ್ರ್ಯ ಹೇಳುತ್ತಾ ಟೋಪಿ ಬುರ್ಖಾ, ಶರಿಯಾ ಕಾನೂನಿಗೆ ಒತ್ತಾಯಿಸುವ ಹುನ್ನಾರ ನಡೆಯುತ್ತಿದೆ. ಕಾಲೇಜಲ್ಲಿ ಇಸ್ಲಾಂ ಕಾನೂನು ಜಾರಿಗೆ ತರುವ ಅವಕಾಶ ಯಾವುದೇ ಕಾರಣಕ್ಕೆ ಕೊಡಬಾರದು. ಇವರಿಗೆ ಸರಕಾರಿ ಶಿಕ್ಷಣ ಬೇಡವಾದರೆ ಮದರಾಸು ಶಿಕ್ಷಣ ಪಡೆಯಬಹುದು. ಆದರೆ ಈ ನೆಪದಲ್ಲಿಪ್ರಾಂಶುಪಾಲರಿಗೆ ಒತ್ತಡ ಹಾಕುವುದನ್ನು ಸಹಿಸಲ್ಲ. ಹಿಂದು ಜಾಗರಣ ವೇದಿಕೆ ಈವರೆಗೆ ಎಲ್ಲವನ್ನು ಸೂಕ್ಷ್ಮವಾಗಿ ನೋಡಿದೆ ಇನ್ನೂ ಈ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ.ಹೀಗೆ ಮುಂದುವರಿದರೆ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜಿಗೆ ಕೇಸರಿ ಶಾಲು ಹಾಕುತ್ತೇವೆ " ಎಂದುಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಹೇಳಿಕೆ ನೀಡಿದ್ದಾರೆ.
ಹಿಜಾಬ್ ವಿವಾದವನ್ನು ಅಂತರಾಷ್ಟ್ರೀಯ ಸಮಸ್ಯೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ಕೆಲ ಮತೀಯ ಸಂಘಟನೆಗಳ ಕೈವಾಡ ಇದೆ. ಈ ವಿವಾದವನ್ನು ಶೀಘ್ರ ಸರಕಾರ ಮತ್ತು ಶಿಕ್ಷಣ ಇಲಾಖೆಗೆ ಬಗೆಹರಿಸಬೇಕು. ಒಂದು ವೇಳೆ ವಿದ್ಯಾರ್ಥಿನಿಯರಿಗೆಹಿಜಾಬ್ ಧರಿಸಲು ಅವಕಾಶ ಮಾಡಿದರೆ ಜಿಲ್ಲೆಯ ಎಲ್ಲಾ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಲ್ಯ ಧರಿಸುವ ಎಚ್ಚರಿಕೆಯನ್ನು ಇದೇ ವೇಳೆ ಹಿಂದೂ ಜಾಗರಣಾ ವೇದಿಕೆ ನೀಡಿದೆ.