ಮಂಗಳೂರು, ಜ 20 (DaijiworldNews/MS): 2021-22ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳ ಭತ್ತ ಖರೀದಿ ಕೇಂದ್ರಗಳನ್ನು ತೆರಯಲಾಗಿದೆ. ರೈತರು ಈ ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಸಾಮಾನ್ಯ ಭತ್ತ ಕ್ವಿಂಟಲ್ಗೆ 1940 ರೂ.ಗಳು ಹಾಗೂ ಎ-ಗ್ರೇಡ್ ಭತ್ತಕ್ಕೆ 1960 ರೂ.ಗಳಿಗೆ ಮಾರಾಟ ಮಾಡಬಹುದಾಗಿದೆ.
ಆಸಕ್ತರು ತಾಲೂಕು ಖರೀದಿ ಕೇಂದ್ರಗಳ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ವಿವರ ಇಂತಿದೆ:
ಮಂಗಳೂರ ತಾಲೂಕಿಗೆ ಸಂಬಂಧಿಸಿದಂತೆ ಶಕ್ತಿನಗರ ಪದವು ಬಳಿಯಲ್ಲಿರುವ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ಪುಟ್ಟಲಿಂಗಯ್ಯ, 9448723139
ಮೂಡಬಿದ್ರಿ ತಾಲೂಕಿಗೆ ಸಂಬಂಧಿಸಿದಂತೆ ಮೂಡಬಿದ್ರಿಯ ಅಲಂಗಾರ್ನ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ರಾಜೇಂದ್ರ ಪ್ರಸಾದ್-9449714066.
ಬಂಟ್ವಾಳ ತಾಲೂಕಿನ ಕಳ್ಳಿಗೆಯ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ವಿಜಯ-9380435485.
ಬೆಳ್ತಂಗಡಿ ತಾಲೂಕಿನ ಹಳೇಪೇಟೆಯ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ಫ್ರಾನ್ಸಿಸ್-9845872644.
ಪುತ್ತೂರು ತಾಲೂಕಿಗೆ ಸಂಬಂಧಿಸಿದಂತೆ ಪುತ್ತೂರಿನ ಎಪಿಎಂಸಿ ಯಾರ್ಡ್ನ ಸಾಲ್ಮರದ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ಚಂದ್ರಹಾಸ ಮಣಿಯಾಣಿ-9449687735.
ಸುಳ್ಯ ತಾಲೂಕಿಗೆ ಸಂಬಂಧಿಸಿದಂತೆ ಎಪಿಎಂಸಿ ಯಾರ್ಡ್ ಕೆ.ಎಫ್.ಸಿ.ಎಸ್.ಸಿ ಸಗಟು ಮಳಿಗೆ, ಚಂದ್ರಹಾಸ ಮಣಿಯಾಣಿ-9449687735.
ತಾಲೂಕು ಮಟ್ಟದಲ್ಲಿ ಸಂಬಂಧಿಸಿದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.