ಕಾಸರಗೋಡು, ಜ. 20 (DaijiworldNews/SM): ಜಿಲ್ಲೆಯಲ್ಲಿ ಗುರುವಾರ ಕೊರೋನಾ ಸೋಂಕಿತರ ಸಂಖ್ಯೆ ಒಂದು ಸಾವಿರದಾಟಿದ್ದು, ಟೆಸ್ಟ್ ಪಾಸಿಟಿವಿಟಿ ರೇಟ್ 36.6ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ 3,098 ಮಂದಿಯ ತಪಾಸಣೆ ನಡೆಸಿದ್ದು, ಈ ಪೈಕಿ 1,135 ಮಂದಿಗೆ ಪಾಸಿಟಿವ್ ದ್ರಢಪಟ್ಟಿದೆ.
ಜಿಲ್ಲೆಯಲ್ಲಿ 351 ಮಂದಿ ಗುಣಮುಖರಾಗಿದ್ದಾರೆ. 3,982 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಪ್ರಸ್ತುತ 9,280 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1, 49 ,125 ಮಂದಿಗೆ ಸೋಂಕು ದ್ರಢಪಟ್ಟಿದ್ದು, 1, 43,836 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಇಲ್ಲಿಯ ತನಕ ಏಳು ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಒಟ್ಟು ಮೃತಪಟ್ಟವರ ಸಂಖ್ಯೆ 967ಕ್ಕೆ ತಲುಪಿದೆ. ಕೇರಳ ರಾಜ್ಯದಲ್ಲಿ ಗುರುವಾರ 46,387 ಪಾಸಿಟಿವ್ ದೃಢಪಟ್ಟಿದೆ.