ಮಂಗಳೂರು ಜ 20 (DaijiworldNews/KP): ತೊಕ್ಕೊಟ್ಟು ನೇತ್ರಾವತಿ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜ. ೨೦ ರ ಗುರುವಾರ ನಡೆದಿದೆ.
ಅಪಘಾತದ ಸ್ಥಳದಲ್ಲಿ ದೊರೆತ ಪಾನ್ ಕಾರ್ಡ್ ಆಧಾರದ ಮೇಲೆ ಪೊಲೀಸರು ಮೃತರನ್ನು ಸಚಿನ್ ಕೆ ಎಂ (32) ಎಂದು ಗುರುತಿಸಲಾಗಿದೆ.
ಉರ್ವದಲ್ಲಿ ಎಲೆಕ್ಟ್ರಿಕಲ್ ಡೆಕೋರೇಟರಾಗಿ ಕೆಲಸ ಮಾಡುತ್ತಿದ್ದ ಅವರ ಬೈಕ್ ರಾತ್ರಿ 11.45ರ ಸುಮಾರಿಗೆ ನೇತ್ರಾವತಿ ಸೇತುವೆ ಬಳಿ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು.
ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅದರೆ ಇಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.