ಕಾಸರಗೋಡು, ಜ. 19 (DaijiworldNews/SM): ಜಿಲ್ಲೆಯಲ್ಲಿ ಬುಧವಾರ 668 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 177 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ 3198 ಮಂದಿ ಚಿಕಿತ್ಸೆಯಲ್ಲಿದ್ದಾರೆ. 8,227 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,47,990 ಮಂದಿಗೆ ಸೋಂಕು ದೃಢ ಪಟ್ಟಿದೆ. 1,43,485 ಮಂದಿ ಗುಣಮುಖರಾಗಿದ್ದಾರೆ. ಮೃತಪಟ್ಟವರ ಸಂಖ್ಯೆ 967ಕ್ಕೇರಿದೆ.