ಉಡುಪಿ, ಜ 19 (DaijiworldNews/KP): ರೈಲ್ವೇ ಪ್ರಯಾಣಿಕನೊಬ್ಬನ ಮೇಲೆ ಸಹಪ್ರಯಾಣಿಕನಿಂದ ನಿಂದನೆ ಮತ್ತು ಹಲ್ಲೆ ನಡೆಸಲಾಗಿದೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿಲಾಗಿದೆ.
ಜನವರಿ 18 ರಂದು ಉತ್ತರ ಕನ್ನಡದ ಯಲ್ಲಾಪುರದ ಕಿರಣ್ ಮಹಾದೇವ್ ಬೋರ್ಕರ್ ಎಂಬುವರು ಮತ್ಸ್ಯಗಂಧ ಲೋಕಮಾನ್ಯ ತಿಲಕ್ ಎಕ್ಸ್ಪ್ರೆಸ್ ರೈಲಿನ ಕಂಪಾರ್ಟ್ಮೆಂಟ್ ಡಿ 2 ಕ್ರಮ ಸಂಖ್ಯೆ 25 ರಲ್ಲಿ ಕುಳಿತು ಪ್ರಯಾಣಿಸುತ್ತಿದ್ದರು. ರೈಲು ಸುಮಾರು 2.15 ಗಂಟೆಗೆ ಮಂಗಳೂರಿನಿಂದ ಹೊರಟು ಸುರತ್ಕಲ್ ದಾಟಿವ ವೇಳೆ ಚಾಸ್ಟೆನ್ ಇನಾಸ್ ಬರೆಟ್ಟೊ ಎಂದು ಗುರುತಿಸಲಾದ ವ್ಯಕ್ತಿಯೊಬ್ಬರು ಮೀಸಲಾತಿ ಸೀಟಿನ ಒಂದು ವಿಷಯದ ಕುರಿತು ಅವರೊಂದಿಗೆ ವಾಗ್ವಾದ ನಡೆಸಿದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಬರೆಟ್ಟೊ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎಂದು ಸಂಜೆ 4.30ಕ್ಕೆ ರೈಲ್ವೇ ಪೊಲೀಸರಿಗೆ ದೂರು ನೀಡುವ ಉದ್ದೇಶದಿಂದ ಕಿರಣ್ ರೈಲಿನಿಂದ ಕೆಳಗಿಳಿಯುತ್ತರುವುದನ್ನು ನೋಡಿದ ರೆಟ್ಟೊ ಅವರನ್ನು ತಡೆದು ಕೈಕಾಲುಗಳಿಗೆ ಹಲ್ಲೆ ನಡೆಸಿದ್ದಾರೆ ಎಂದು ದೂರುದಾರರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಮಣಿಪಾಲ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 341, 323, 504 ಮತ್ತು 506 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.