ಬಂಟ್ವಾಳ, ಜ 19 (DaijiworldNews/HR): ಬಂಟ್ವಾಳ ಡಿವೈಎಸ್ಪಿಯಾಗಿ ಪ್ರತಾಪ್ ಥೋರಾಟ್ ಅವರು ಬುಧವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಡಿಎಸ್ಪಿ ವೆಲೆಂಟೈನ್ ಡಿ.ಸೋಜ ಅವರ ವರ್ಗಾವಣೆ ಬಳಿಕ ಎ.ಎಸ್.ಪಿ.ಶಿವಾಂಶು ರಜಪೂತ್ ಅವರ ನೇಮಕ ಮಾಡಲಾಗಿತ್ತು. ಆದರೆ ಅವರಿಗೆ ಹೆಚ್ಚಿನ ತರಬೇತಿಯ ಹಿನ್ನೆಲೆಯಲ್ಲಿ ಅವರು ತರಬೇತಿಗಾಗಿ ಹೋಗಿರುವುದರಿಂದ ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ಪ್ರತಾಪ್ ಥೋರಾಟ್ ಅವರನ್ನು ನೇಮಕ ಮಾಡಲಾಗಿದೆ.
ಅನುಭವಿ ಪೋಲೀಸ್ ಅಧಿಕಾರಿಯಾಗಿ ಅನೇಕ ಕಡೆಗಳಲ್ಲಿ ಸಿ.ಸಿಬಿ ಸಹಿತ ವಿವಿಧ ವಿಂಗ್ ಗಳಲ್ಲಿ ಕೆಲಸ ಮಾಡಿ ಹೆಸರು ಪಡೆದ ಓರ್ವ ದಕ್ಷ ಅಧಿಕಾರಿಯಾಗಿದ್ದಾರೆ.
ಇನ್ನು ಬೆಂಗಳೂರು, ಕಾರವಾರ, ಬೆಳಗಾಂ, ಬಳ್ಳಾರಿಯಲ್ಲಿ ಪ್ರತಾಪ್ ಥೋರಾಟ್ ಅವರು ಕೆಲಸ ಮಾಡಿ ಇದೀಗ ಬೆಂಗಳೂರು ಟೆರರಿಸ್ಟ್ ಸ್ಕಾಡ್ ನಿಂದ ಬಂಟ್ವಾಳ ಡಿವೈಎಸ್ಪಿಯಾಗಿ ವರ್ಗಾವಣೆ ಯಾಗಿದ್ದಾರೆ.
ಬಂಟ್ವಾಳ ಎಎಸ್.ಪಿ.ಶಿವಾಂಶು ಅವರು ಮದುವೆ ರಜೆಯಲ್ಲಿ ಹೋಗಿದ್ದ ಕಳೆದ ತಿಂಗಳು ಇವರು ಬಂಟ್ವಾಳದಲ್ಲಿ 10 ದಿನಗಳ ಕಾಲ ಡಿವೈಎಸ್ಪಿಯಾಗಿ ಕೆಲಸ ಮಾಡಿ ವಾಪಸು ಹೋಗಿದ್ದರು. ಮತ್ತೆ ಅದೇ ಸ್ಥಾನಕ್ಕೆ ಬಂದಿರುವ ಥೋರಾಟ್ ಅವರ ಹೆಸರು ಬಂಟ್ವಾಳಕ್ಕೆ ಬರುವ ಬಗ್ಗೆ ಈ ಹಿಂದೆಯೇ ಕೇಳಿ ಬಂದಿತ್ತು.