ಮಂಗಳೂರು ಜ 18 (DaijiworldNews/HR): ನಗರದ ಖಾಸಗಿ ಗಣಪತಿ ಪಿಯು ಕಾಲೇಜಿನ 17ರ ಹರೆಯದ ವಿದ್ಯಾರ್ಥಿಯೊಬ್ಬ ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ಕಾರಣ ಕಾಲೇಜಿನ ಪ್ರಾಂಶುಪಾಲರು ವಿದ್ಯಾರ್ಥಿಗೆ ತರಗತಿಗೆ ಪ್ರವೇಶವನ್ನು ನಿರಾಕರಿಸಿದ್ದು, ಕಾಲೇಜಿನ ಈ ನಡೆಗೆ 'ವೇಕ್ ಅಪ್ ಮಂಗಳೂರು' ಬಳಗದ ಸದಸ್ಯರು ವಿರೋಧಿಸಿ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಿ ಸ್ವತಃ ಅವರೆ ಕೊರೊನಾಗೆ ಲಸಿಕೆ ಹಾಕಿಸಿದ್ದಾರೆ.
ಸೋಮವಾರದಂದು ಪ್ರಾಂಶುಪಾಲರನ್ನು ಭೇಟಿ ಮಾಡಿದ ವೇಕ್ ಅಪ್ ಮಂಗಳೂರು ಬಳಗ ಗುಂಪಿನ ಸದಸ್ಯರು, 15-18 ವಯಸ್ಸಿನ ವಿದ್ಯಾರ್ಥಿಗಳಿಗೆ ಒತ್ತಾಯ ಪೂರಕವಾಗಿ ಲಸಿಕೆ ಹಾಕಿಸುವಂತಿಲ್ಲ ಎಂದು ವಾದಿಸಿದ್ದಾರೆ. ಕಾಲೇಜಿನವರು ಬಲವಂತವಾಗಿ ಲಸಿಕೆ ಹಾಕಿಸಲು ಸಾಧ್ಯವಿಲ್ಲ ಮತ್ತು ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುವಂತಿಲ್ಲ ಎಂದು ಹೇಳಿದರು. ಬಲವಂತವಾಗಿ ವ್ಯಾಕ್ಸಿನೇಷನ್ ಮಾಡುವುದನ್ನು ಸುಪ್ರೀಂ ಕೋರ್ಟ್, ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅವರು ಸೂಚಿಸಿದ್ದಾರೆ.
ಇನ್ನು ಪ್ರಾಂಶುಪಾಲರು ಮತ್ತು ಇತರ ಕಾಲೇಜು ಸಿಬ್ಬಂದಿಗೆ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳಬೇಕು ನಂತರ ಸಮಸ್ಯೆಯನ್ನು ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ಮಾಡಬೇಕು ಮತ್ತು ಅವರ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.