ಮಂಗಳೂರು, ಜ 18 (DaijiworldNews/HR): ಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ವಾಗ್ವಾದ ನಡೆಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರವಾಗಿ ಇಂದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಿಗದಿಯಾಗಿದ್ದು ಅದರಲ್ಲಿ ಮಾಜಿ ಸಚಿವ ರಮಾನಾಥ್ ರೈ ವಿರುದ್ಧ ಯುವ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದು, ಈ ವೇಳೆ ಶಾಸಕ ಯು.ಟಿ.ಖಾದರ್, ಎಂಎಲ್ಸಿ ಮಂಜುನಾಥ ಭಂಡಾರಿ ಸೇರಿದಂತೆ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ಇನ್ನು ಜಿಲ್ಲಾ ಕಚೇರಿ ಸಭಾಂಗಣದ ಬಾಗಿಲನ್ನು ಕಾರ್ಯಕರ್ತರು ಬಂದ್ ಮಾಡಿದ್ದು, ಯೂತ್ ಕಾಂಗ್ರೆಸ್ ಸದಸ್ಯರನ್ನ ನಾಯಕರು ಹೊರಹಾಕಿದ ಘಟನೆ ನಡೆದಿದೆ.