ಕಾಸರಗೋಡು, ಜ 18 (DaijiworldNews/HR): ಕಾರು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಆಟೋ ರಿಕ್ಷಾ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ಚೆರ್ಕಳ - ಜಾಲ್ಸೂರು ರಸ್ತೆಯ ಪೊವ್ವಲ್ನಲ್ಲಿ ನಡೆದಿದೆ.
ಕಾನತ್ತೂರು ಪಯಾರ್ ಪಳ್ಳದ ವಿಜಯ್(44) ಮೃತಪಟ್ಟವರು.
ಪಿಕಪ್ ವ್ಯಾನ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಕೇಟರಿಂಗ್ ಸರ್ವಿಸ್ ನಡೆಸುತ್ತಿದ್ದ ವಿಜಯ ಬೋವಿಕ್ಕಾನದಿಂದ ಸಾಮಾನು ಖರೀದಿಸಿ ಆಟೋ ರಿಕ್ಷಾದಲ್ಲಿ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ.
ಗಂಭೀರ ಗಾಯಗೊಂಡ ವಿಜಯ್ ರವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದು, ಅಪಘಾತದಲ್ಲಿ ಆಟೋ ಚಾಲಕ ಗಾಯಗೊಂಡಿದ್ದಾರೆ.
ಇನ್ನು ಈ ಬಗ್ಗೆ ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.