ಸುಳ್ಯ, ಜ 18 (DaijiworldNews/HR): ಸೋಣಂಗೇರಿ ಸಮೀಪದ ಸುತ್ತುಕೋಟೆ ಸಂಭವಿಸಿದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಗಂಭೀರಗೊಂಡ ಘಟನೆ ನಡೆದಿದೆ.
ದುಗ್ಗಲಡ್ಕದ ಕಾರ್ ಬಾಡಿ ಶಾಪ್ನ ಮಾಲಕ ಯತೀನ್ ದುಗ್ಗಲಡ್ಕದಿಂದ ಸುಳ್ಯದ ಕಡೆಗೆ ಬರುತ್ತಿದ್ದು,ಸುಳ್ಯ ಕಡೆಯಿಂದ ಹೋಗುತ್ತಿದ್ದ ಟಿಪ್ಪರ್ ಗೆ ಸೋಣಂಗೇರಿ ಸಮೀಪದ ಸುತ್ತುಕೋಟೆ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿದ್ದು, ಯತೀನ್ ರವರ ಎಡ ಕೈ, ತಲೆ,ಮುಖದ ಭಾಗಕ್ಕೆ ಗಾಯವಾಗಿರುವುದಾಗಿ ತಿಳಿದುಬಂದಿದೆ.
ಇನ್ನು ಬೈಕ್ ಕೂಡ ಜಖಂಗೊಂಡಿದ್ದು, ಟಿಪ್ಪರ್ ರಾಂಗ್ ಸೈಡ್ ಬಂದದ್ದೆ ಅಪಘಾತಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ಗಾಯಾಳುವನ್ನು ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.