ಬಂಟ್ವಾಳ, ಜ. 17 (DaijiworldNews/SM): ರುದ್ರಗಿರಿಯ ರಣಕಹಳೆ ಎಂಬ ಶೀರ್ಷಿಕೆಯಡಿ ಶ್ರೀ ಕ್ಷೇತ್ರ ಕಾರಿಂಜವನ್ನು ಉಳಿಸಲು ಎರಡು ಹಂತದ ಹೋರಾಟ ಹಿಂದು ಜಾಗರಣ ವೇದಿಕೆಯ ವತಿಯಿಂದ ನಡೆದಿದ್ದು 3ನೇ ಹಂತದ ಹೋರಾಟ ಪ್ರಾರಂಭವಾಗಿದೆ.
ಹಿಂದು ಜಾಗರಣ ವೇದಿಕೆ ಮತ್ತು ಶ್ರೀ ಕಾರಿಂಜ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಬಂಟ್ವಾಳ ತಾಲೂಕಿನ 84 ಗ್ರಾಮಗಳ ಪ್ರತಿ ಹಿಂದು ಮನೆಯನ್ನು ಸಂಪರ್ಕಿಸಿ ಅಭಿಯಾನ ಮತ್ತು ಸಹಿ ಸಂಗ್ರಹ ಕಾರ್ಯಕ್ರಮ ನಡೆಯುತಿದೆ.
ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮನೆ ಮನೆ ಭೇಟಿ ಮಾಡಿದ್ದಾರೆ. ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಸಿದ್ಧ ಎನ್ನುವ ನಿರ್ಧಾರವನ್ನು ಹಿಂದೂ ಜಾಗರಣ ವೇದಿಕೆ ಮಾಡಿಕೊಂಡಿದೆ.