ಮಂಗಳೂರು, ಜ. 17 (DaijiworldNews/SM): ಪ್ರಜಾಪ್ರಭುತ್ವ ದಿನದಂದು ದೆಹಲಿಯ ರಾಜಪಥದಲ್ಲಿ ಚಲಿಸುವ ಟ್ಯಾಬ್ಲೋಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳಿವೆ. ಆದರೆ, ಕೇಂದ್ರ ಕಳುಹಿಸಿದ ಮಾರ್ಗದರ್ಶಿ ಸೂತ್ರಗಳನ್ನು ಕೇರಳ ನಿರ್ಲಕ್ಷ್ಯ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
ಕೇರಳ ಸರಕಾರದ ಧೋರಣೆಯಿಂದ ರದ್ದಾಗಿದೆ ವಿನ: ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಎನ್ನುವ ಕಾರಣಕ್ಕೆ ಕೇಂದ್ರ ಸರಕಾರ ರದ್ದು ಮಾಡಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ನಾರಾಯಣ ಗುರುಗಳ ಟ್ಯಾಬ್ಲೊ ವಿರೋಧಿಸಿರುವ ಹಿನ್ನೆಲೆಯಲ್ಲಿ ಎಲ್ಲೆಡೆಯಲ್ಲಿರುವ ಬಿಲ್ಲವ ಸಮುದಾಯ ಆಕ್ರೋಶಗೊಂಡಿದೆ. ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ.