ಉಳ್ಳಾಲ, ಜ. 17 (DaijiworldNews/SM): ಬಾವಿಗೆ ಬಿದ್ದು ವೃದ್ಧ ಮಹಿಳೆಯೋರ್ವರು ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಿಲಾರು ಶಾಲೆ ಬಳಿ ಸೋಮವಾರ ಸಂಜೆ ವೇಳೆ ಸಂಭವಿಸಿದೆ.
ಪಿಲಾರು ಶಾಲೆ ಬಳಿಯ ದಿ. ಮಂಜಪ್ಪ ಪಿಲಾರ್ ಎಂಬವರ ಪತ್ನಿ ಕಲ್ಯಾಣಿ(85) ಮೃತರು. ಮನೆಯಲ್ಲಿ ಪುತ್ರ ಹೊರಹೋಗಿದ್ದ ಸಂದರ್ಭ ಮನೆಯಂಗಳದಲ್ಲಿರುವ ಬಾವಿಯತ್ತ ನೀರಿಗೆಂದು ಹೋದವರು ಕಾಲುಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃತರು ಮೂವರು ಪುತ್ರಿಯರು, ಇಬ್ಬರು ಪುತ್ರರನ್ನು ಅಗಲಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣ ದಾಖಲಾಗಿದೆ.