ಕಾಸರಗೋಡು, ಜ. 17 (DaijiworldNews/SM): ಜಿಲ್ಲೆಯಲ್ಲಿ ಸೋಮವಾರ 574 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 100 ಮಂದಿ ಗುಣಮುಖರಾಗಿದ್ದಾರೆ.
ಪ್ರಸ್ತುತ 1,336 ಮಂದಿ ಚಿಕಿತ್ಸೆಯಲ್ಲಿದ್ದಾರೆ. 7,069 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,46,716 ಮಂದಿಗೆ ಸೋಂಕು ದ್ರಢಪಟ್ಟಿದೆ. ಈ ಪೈಕಿ 1,43,073 ಮಂದಿ ಗುಣಮುಖರಾಗಿದ್ದಾರೆ. ಒಟ್ಟು ಮೃತಪಟ್ಟವರ ಸಂಖ್ಯೆ 914ಕ್ಕೆ ತಲುಪಿದೆ.