ಕಾಸರಗೋಡು, ಜ. 17 (DaijiworldNews/SM): ಕೊರಗಜ್ಜನ ವೇಷ ಧರಿಸಿ ವಿವಾದ, ಪ್ರತಿಭಟನೆಗೆ ಕಾರಣನಾಗಿದ್ದ ನವ ವರನ ಮನೆ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು, ಗೇಟ್ ನ ಗೋಡೆಗೆ ಕಾವಿ ಬಣ್ಣ ಬಳಿಯಲಾಗಿದೆ.
ಬೇಕೂರು ಅಗರ್ತಿಮೂಲೆಯಲ್ಲಿರುವ ಮನೆಗೆ ಕಲ್ಲೆಸೆಯಲಾಗಿದ್ದು, ಮುಂಭಾಗದ ಎರಡು ಕಿಟಿಕಿ ಗಾಜುಗಳು ಹುಡಿಯಾಗಿವೆ. ಸೋಮವಾರ ಮುಂಜಾನೆ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ಕೃತ್ಯ ನಡೆಸಿದ್ದು, ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಮುಂಜಾನೆ ಶಬ್ದ ಕೇಳಿ ಮನೆಯಲ್ಲಿದ್ದವರು ಬೊಬ್ಬೆ ಹಾಕಿದಾಗ ಇಬ್ಬರು ಬೈಕ್ ನಲ್ಲಿ ಪರಾರಿಯಾಗಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳಿಗಾಗಿ ಮಂಜೇಶ್ವರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.