ಕಾರ್ಕಳ, ಜ 17 (DaijiworldNews/HR): ಪರೀಕ್ಷೆಯಲ್ಲಿ ಕಡಿಮೆ ಅಂಕ ಅಂಕಗಳಿಸಿದಕ್ಕೆ ಹೆಬ್ರಿಯ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಕೆರೆಬಟ್ಟು ನಿವಾಸಿ ಸತೀಶ್ ಶೆಟ್ಟಿ ಮತ್ತು ಮಮತಾ ಶೆಟ್ಟಿ ದಂಪತಿಯ ಪುತ್ರ ಅನ್ವಿತ್ ಶೆಟ್ಟಿ(14) ಎಂದು ಗುರುತಿಸಲಾಗಿದೆ.
ಭಾನುವಾರ ಬೆಳಗ್ಗೆ ಬಾತ್ ರೂಂ ಪ್ರವೇಶಿಸಿದ ಅಣ್ಣ ಅಲ್ಲೇ ಇದ್ದದ್ದನ್ನು ಗಮನಿಸಿದ ಅನ್ವಿತ್ ಕಿರಿಯ ಸಹೋದರ ಬಾತ್ ರೂಂ ಬಾಗಿಲು ಬಡಿದರೂ ಅನ್ವಿತ್ ತೆರೆಯಲಿಲ್ಲ. ನಂತರ ಕಿಟಕಿಯ ಮೂಲಕ ಇಣುಕಿ ನೋಡಿದಾಗ ಅನ್ವಿತ್ ಬಾತ್ ರೂಂ ಒಳಗಿದ್ದ ಕಬ್ಬಿಣದ ರಾಡ್ ಗೆ ಚೂಡಿದಾರ್ ಶಾಲ್ನಿಂದ ಕುತ್ತಿಗೆಗೆ ಬಿಗಿದುಕೊಂಡಿರುವುದು ಕಂಡುಬಂದಿದೆ.
ತಕ್ಷಣ ಪೋಷಕರು ಬಾಲಕನನ್ನು ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.