ಕಾರ್ಕಳ, ಜ. 16 (DaijiworldNews/SM): ಹೈನುಗಾರಿಕೆ ನಡೆಸಿ ಜೀವನ ಸಾಗಿಸುತ್ತಿದ್ದ ಕಾರ್ಕಳದ ಮಿಯ್ಯಾರು ಕಜೆ ನಿವಾಸಿ ಕಾರ್ಕಳದ ಯಶೋದಾ ಆಚಾರ್ಯ ಎಂಬವರಿಗೆ ಸೇರಿದ 16 ಗೋವುಗಳನ್ನು ಕಳವುಗೈದಿರುವ ಪ್ರಕರಣಕೆ ಸಂಬಂಧಿಸಿದಂತೆ ವಿಶ್ವಕರ್ಮ ಜಾಗೃತದಳದ ಸದಸ್ಯರು ಪರ್ಪಲಗಿರಿಯ ಕಲ್ಲುರ್ಟಿ- ಕಲ್ಕುಡ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ತಪಿಸ್ಥರಿಗೆ ತಕ್ಕ ಶಾಸ್ತ್ರಿಯಾಗುವಂತೆ ಮೊರೆಹೋಗಿದ್ದಾರೆ.
ವಿಶ್ವಕರ್ಮ ಜಾಗೃತದಳದ ಸದಸ್ಯರು ಯಶೋಧಾ ಅವರ ಮನೆಗೆ ತೆರಳಿ ಸಾಂತ್ವನ ಹೇಳಿ ಧೈರ್ಯ ತುಂಬಿದ್ದಾರೆ. ಕುಟುಂಬಕ್ಕೆ ಮುಂದಿನ ಜೀವನಕ್ಕೆ ಆಧಾರವಾಗುವಂತೆ ಕರು ಸಹಿತವಾದ 2 ಗೋವನ್ನು ದಾನವಿತ್ತಿದ್ದಾರೆ.
ವಿಶ್ವಕರ್ಮ ಜಾಗೃತಿ ದಳದ ಎ.ಜೆ.ಜಯಶಂಕರ ಆಚಾರ್ಯ, ಗೌರವ ಸಲಹೆಗಾರ ಎ ಜೆ ಯೋಗೀಶ್, ಪ್ರಜ್ವಲ್ ಆಚಾರ್, ಕವಿತಾ ಹರೀಶ್ ಆಚಾರ್ಯ, ಪ್ರದೀಪ್ಆಚಾರ್, ಪದಾಧಿಕಾರಿಗಳು ಹಾಗೂ ಸದಸ್ಯರ ಜೊತೆಗಿದ್ದರು.