ಕಾರ್ಕಳ, ಜ. 16 (DaijiworldNews/SM): ಜೋಡುರಸ್ತೆ ಕಡೆಯಿಂದ ಹಿರ್ಗಾನ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಜನವರಿ 15ರ ರಾತ್ರಿ ವೇಳೆಗೆ ಸಂಭವಿಸಿದ ಈ ಘಟನೆಯಲ್ಲಿ ಜೋಡುರಸ್ತೆಯ ನಿವಾಸಿ ಕರಿಯ ಶೆಟ್ಟಿ(69) ಘಟನೆಯಲ್ಲಿ ಮೃತಪಟ್ಟವರು. ಕಾರ್ಕಳದಿಂದ ಹೆಬ್ರಿ ಕಡೆಗೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾರುತಿ ಓಮ್ನಿ ಕಾರಿನ ಚಾಲಕ ಅನಿಲ್ ವಾಹನ ಚಲಾಯಿಸಿ ಪಾದಾಚಾರಿ ಕರಿಯ ಶೆಟ್ಟಿ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದನು.
ಪರಿಣಾಮ ಕರಿಯ ಶೆಟ್ಟಿರವರ ತಲೆಯ ಹಿಂಬದಿ ಮತ್ತು ಸೊಂಟಕ್ಕೆ ತೀವ್ರ ತರಹದ ಒಳ ಜಖಂ ಆದವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.