ಬಂಟ್ವಾಳ, ಜ. 16 (DaijiworldNews/SM): ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಸಾವನ್ನಪ್ಪಿದ ಘಟನೆ ಮಾಣಿಯಿಂದ ವರದಿಯಾಗಿದೆ. ಮಾಣಿ ಕಾಪಿಕಾಡು ನಿವಾಸಿ ಶಿವಪ್ರಸಾದ್ ಕೆ(23) ಜ.16 ರಂದು ಮೃತಪಟ್ಟವರು.
ಶಿವಪ್ರಸಾದ್ ಕಬಡ್ಡಿ ಆಟಗಾರನಾಗಿದ್ದು, ಮಾಣಿ ಯುವಕ ಮಂಡಲದ ಸದಸ್ಯರಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೇ ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾದರು ಎಂದು ತಿಳಿದು ಬಂದಿದೆ. ಈತ ಸೈನ್ಯ ಸೇರಬೇಕೆನ್ನುವ ಇಂಗಿತ ಹೊಂದಿದ್ದ.
ಕಳೆದ ಎರಡು ವರ್ಷಗಳಲ್ಲಿ ಹಾಸ್ಯದ ಮೂಲಕ ಜನರ ಮನಸ್ಸು ಗೆದ್ದ ಯುವ ಕಲಾವಿದ ಶಿವಪ್ರಸಾದ್ ಎಂಬ ಅಪ್ಪಟ್ಟ ದೇಶಪ್ರೇಮಿಯ ಕನಸು ನನಸಾಗದೆ ಜೀವನ ಅಂತ್ಯ ಕಂಡಿದೆ. ಕೊರೊನಾ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಜನರಿಗೆ ಮನರಂಜನೆ ಮೂಲಕ ರಂಜಿಸಿದ ಶಿವಪ್ರಸಾದ್ ಅತ್ಯಂತ ಹೆಚ್ಚು ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದ. ಸ್ನೇಹ ಜೀವಿ, ಬಾಲ್ಯದಿಂದಲೇ ದೇಶಸೇವೆಯ ಅಭಿಮಾನಹೊಂದಿದ್ದ ಈತ ಸೈನಿಕನಾಗಬೇಕು ಎಂಬ ಕನಸು ಈತನಾಗಿತ್ತು.